Friday, July 26, 2013

ಶುಕ್ಲ ಯಜುರ್ವೇದೀಯ ವೈಶ್ವದೇವ


                      // ಶ್ರೀಶಂ ವಂದೇ ಜಗದ್ಗುರುಂ //
                        ಶುಕ್ಲ ಯಜುರ್ವೇದೀಯ ವೈಶ್ವದೇವ

 ೧)  ಆಚಮನಂ -
ಓಂ ಕೇಶವಾಯ ಸ್ವಾಹಾ | ಓಂ ನಾರಾಯಣಾಯ ಸ್ವಾಹಾ | ಓಂ ಮಾಧವಾಯ ಸ್ವಾಹಾ | (ಎಂದು ಮೂರು ಸಲ ಒಂದು ಉದ್ಧರಣೆ ನೀರನ್ನು ಸ್ವೀಕರಿಸಬೇಕು.) ಓಂ ಗೋವಿಂದಾಯ ನಮಃ, ( ಇತಿ ದಕ್ಷಿಣ ಪಾಣಿಂ ಪ್ರಕ್ಷಾಲ್ಯ (ಎರಡೂ
ಕೈಗಳನ್ನು ತೊಳೆಯುವದು)) ಓಂ ವಿಷ್ಣವೇ ನಮಃ ಓಂ ಮಧುಸೂದನಾಯ ನಮಃ (ಮೇಲಿನ ತುಟಿಯ ಸ್ಪರ್ಶ), ಓಂ ತ್ರಿವಿಕ್ರಮಾಯ ನಮಃ (ಕೆಳ ತುಟಿ), ಓಂ ವಾಮನಾಯ ನಮಃ (ಬಲಗಲ್ಲ), ಓಂ ಶ್ರೀಧರಾಯ ನಮಃ (ಎಡಗಲ್ಲ), ಓಂ ಹೃಷೀಕೇಶಾಯ ನಮಃ (ಹಸ್ತ), ಓಂ ಪದ್ಮನಾಭಾಯ ನಮಃ (ಪಾದ), ಓಂ ದಾಮೋದರಾಯ ನಮಃ (ಶಿರಸ್ಸು), ಓಂ ಸಂಕರ್ಷಣಾಯ ನಮಃ (ಮುಖ), ಓಂ ವಾಸುದೇವಾಯ ನಮಃ (ಮೂಗಿನ ಬಲ ಹೊರಳೆ), ಓಂ ಪ್ರದ್ಯುಮ್ನಾಯ ನಮಃ (ಮೂಗಿನ ಎಡ ಹೊರಳೆ)  ಓಂ ಅನಿರುದ್ಧಾಯ ನಮಃ (ಬಲ ಕಣ್ಣು), ಓಂ ಪುರುಷೋತ್ತಮಾಯ ನಮಃ (ಎಡ ಕಣ್ಣು), ಓಂ ಅಧೋಕ್ಷಜಾಯ ನಮಃ (ಬಲ ಕಿವಿ), ಓಂ ನಾರಸಿಂಹಾಯ ನಮಃ (ಎಡ ಕಿವಿ), ಓಂ ಅಚ್ಯುತಾಯ ನಮಃ (ನಾಭಿ), ಓಂ ಜನಾರ್ದನಾಯ ನಮಃ (ಹೃದಯ), ಓಂ ಉಪೇಂದ್ರಾಯ ನಮಃ
(ಶಿರಸ್ಸು), ಓಂ ಹರಯೇ ನಮಃ (ಬಲಭುಜ), ಓಂ ಶ್ರೀ ಕೃಷ್ಣಾಯ ನಮಃ (ಎಡ ಭುಜ) 

೨) ಪ್ರಾಣಾಯಾಮಃ -
ಅಸ್ಯ ಶ್ರೀ ಪ್ರಣವ ಮಂತ್ರಸ್ಯ ಪರಬ್ರಹ್ಮ ಋಷಿಃ | ಗಾಯತ್ರೀ ಛಂದಃ | ಪರಮಾತ್ಮಾ ದೇವತಾ ಪ್ರಾಣಾಯಾಮೇ ವಿನಿಯೋಗಃ || ಒಂದು ಉದ್ಧರಣೆ ನೀರನ್ನು ಬಿಡಬೇಕು)
 ಮಂತ್ರ :
ಓಂ ಭೂಃ | ಓಂ ಭುವಃ | ಓಂ ಸುವಃ | ಓಂ ಮಹಃ | ಓಂ ಜನಃ | ಓಂ ತಪಃ | ಓಂ ಸತ್ಯಂ || ಓಂ ತತ್ಸವಿತುರ್ವರೇಣ್ಯಂ | ಭರ್ಗೋ ದೇವಸ್ಯ ಧೀಮಹಿ || ಧಿಯೋ ಯೋ ನಃ ಪ್ರಚೋದಯಾತ್ || ಓಂ ಆಪೋ ಜ್ಯೋತೀರಸೋಮೃತಂ ಬ್ರಹ್ಮ ಭೂರ್ಭುವಃಸ್ವರೋಂ || (ಇದೇ ರೀತಿಯಾಗಿ ಮೂರು ಸಾರಿ ಉಚ್ಛರಿಸಿ ಪ್ರಾಣಾಯಾಮ ಮಾಡಬೇಕು.)

೩)  ಸಂಕಲ್ಪ -
 ಶುಭೇ ಶೋಭನೇ ಮುಹೂರ್ತೇ ಶ್ರೀ ಶ್ವೇತವರಾಹಕಲ್ಪೇ, ವೈವಸ್ವತ ಮನ್ವಂತರೇ, ಕಲಿಯುಗೇ, ಪ್ರಥಮ ಚರಣೇ, ಭಾರತ ವರ್ಷೇ, ಭರತ ಖಂಡೇ, ಜಂಬೂ ದ್ವೀಪೇ, ಬ್ರಹ್ಮಣಃ ದ್ವಿತೀಯ ಪರಾರ್ಧೇ, ಪುಣ್ಯೋದಯೇ, ದಂಡಕಾರಣ್ಯೇ ದೇಶೇ, ಗೋದಾವರ್ಯಾಃ ದಕ್ಷಿಣೇ ತೀರೇ, ಶಾಲಿವಾಹನ ಶಕೇ, ಬೌದ್ಧಾವತಾರೇ, ರಾಮ ಕ್ಷೇತ್ರೇ, ಅಸ್ಮಿನ್ ವರ್ತಮಾನೇ  ಚಾಂದ್ರಮಾನೇನ ...... ಸಂವತ್ಸರೇ ..... ಅಯನೇ .... ಋತೌ ... ಮಾಸೇ .... ಪಕ್ಷೇ .... ತಿಥೌ .... ವಾಸರೇ .... ನಕ್ಷತ್ರೇ ಶುಭಯೋಗೇ, ಶುಭ ಕರಣೇ, ಏವಂ ಗುಣ ವಿಶೇಷಣ ವಿಶಿಷ್ಟಾಯಾಂ ಶುಭತಿಥೌ ಅಗ್ನ್ಯಂತರ್ಗತ ಭಾರತೀರಮಣಮುಖ್ಯಪ್ರಾಣಾಂತರ್ಗತ ಹರಿಣೀಪತಿ ಪರಶುರಾಮಪ್ರೀತ್ಯರ್ಥಂ ಪಂಚಮಹಾಯಜ್ಞಾಂಗ ಪ್ರಾತಃ/ಸಾಯಂ ವೈಶ್ವದೇವಾಖ್ಯಂ ಕರ್ಮ ಕರಿಷ್ಯೇ | ತದಂಗ ಪಂಚಭೂಸಂಸ್ಕಾರಪೂರ್ವಕ ಅಗ್ನಿಪ್ರತಿಷ್ಠಾಪನಂ ಅಹಂ ಕರಿಷ್ಯೇ || ತತ್ರ ದರ್ಭೈಸ್ತುಲಸೀದಲೇನ ವಾ ಪ್ರದಕ್ಷಿಣೇನ ಪರಿಸಮುಹ್ಯ ಇತಿ ತ್ರಿವಾರಂ ಪರಿಸಮುಹ್ಯ | ಗೋಮಯೋದಕೇನ ಪಶ್ಚಿಮಾದಾರಭ್ಯ ಪ್ರಾಗಾಂತಂ ಉಪಲಿಪ್ಯ || ಯಜ್ಞಕಾಷ್ಠೇನ ತ್ರಿರುಲ್ಲಿಖ್ಯ | ಅಂಗುಷ್ಠ - ಅನಾಮಿಕಾಭ್ಯಾಂ ಪ್ರಾಂಚಃ ಪಾಂಸೂನುದ್ಧೃತ್ಯ || ಕುಶೋದಕೈಃ ತ್ರಿರಭ್ಯುಕ್ಷ್ಯ || ಆಗ್ನೇಯಕೋಣೇ ಅಗ್ನಿಂ ನಿಧಾಯ || ತತ್ರ ಲೌಕಿಕಾಗ್ನಿಂ ತಾಮ್ರಪಾತ್ರೇಣ ಮೃತ್ಪಾತ್ರೇಣ ವಾ ಆನೀಯ ||

೪)     ಅನ್ವಗ್ನಿರಿತ್ಯಸ್ಯ ಮಂತ್ರಸ್ಯ ಪುರೋಧಾಃ ಋಷಿಃ ತ್ರಿಷ್ಟುಪ್ ಛಂದಃ ಅಗ್ನಿಃ ದೇವತಾ, ಅಗ್ನ್ಯಾನಯನೇ ವಿನಿಯೋಗಃ
 ಓಮ್ ಅನ್ವಗ್ನಿರುಷಸಾಮಗ್ರಮಖ್ಯದನ್ವಹಾನಿ ಪ್ರಥಮೋ ಜಾತವೇದಾಃ | 
     ಅನುಸೂರ್ಯಸ್ಯ  ಪುರುತ್ರಾಚ ರಶ್ಮೀನನುದ್ಯಾವಾ ಪೃಥಿವೀ ಆತತಂಥ || ಇತ್ಯನೇನ ಪಾಕಶಾಲಾಯಾಃ ಲೌಕಿಕಾಗ್ನಿಮಾದಾಯ

೫)    ಅಗ್ನಿ ಪ್ರತಿಷ್ಠಾಪನಂ.
 ಪೃಷ್ಟೋದಿವೀತಿ ಮಂತ್ರಸ್ಯ ಕುತ್ಸಃ ಋಷಿಃ ತ್ರಿಷ್ಟುಪ್ ಛಂದಃ ವೈಶ್ವಾನರಃ ದೇವತಾ ಅಗ್ನಿಪ್ರತಿಷ್ಠಾಪನೇ ವಿನಿಯೋಗಃ.
 ಓಂ ಪೃಷ್ಟೋದಿವಿ ಪೃಷ್ಟೋ ಅಗ್ನಿಃ ಪೃಥಿವ್ಯಾಂ ಪೃಷ್ಟೋ ವಿಶ್ವಾ ಓಷಧೀರಾವಿವೇಶ |
 ವೈಶ್ವಾನರಃ ಸಹಸಾ ಪೃಷ್ಟೋ ಅಗ್ನಿಃ ಸನೋದಿವಾ ಸರಿಷಸ್ಪಾತು ನಕ್ತಂ || ಇತಿ ಪಾವಕ ನಾಮಾನಂ ಅಗ್ನಿಂ ಪ್ರತಿಷ್ಠಾಪ್ಯ || ಸುಪ್ರತಿಷ್ಟಿತಮಸ್ತು || ತ್ರಿಭಿಃ ಸಾವಿತ್ರೈಃ ಪ್ರಜ್ವಾಲ್ಯ ||

೬)  ಅಗ್ನಿ ಪ್ರಜ್ವಾಲನಂ -
ತತ್ಸವಿತುಃ ಇತ್ಯಸ್ಯ ಮಂತ್ರಸ್ಯ ವಿಶ್ವಾಮಿತ್ರ ಋಷಿಃ ಗಾಯತ್ರೀ ಛಂದಃ ಸವಿತಾ ದೇವತಾ | ತಾƒಸವಿತುರಿತ್ಯಸ್ಯ ಮಂತ್ರಸ್ಯ ಕಣ್ವಋಷಿಃ ತ್ರಿಷ್ಟುಪ್ ಛಂದಃ ಸವಿತಾ ದೇವತಾ || ವಿಶ್ವಾನಿ ದೇವ ಇತ್ಯಸ್ಯ ಮಂತ್ರಸ್ಯ ನಾರಾಯಣ ಋಷಿಃ ಗಾಯತ್ರೀ ಛಂದಃ ಸವಿತಾ ದೇವತಾ ಸರ್ವೇಷಾಂ ಅಗ್ನಿಪ್ರಜ್ವಾಲನೇ ವಿನಿಯೋಗಃ ||
     ಓಂ ತತ್ಸವಿತುರ್ವರೇಣ್ಯಂ ಭರ್ಗೋ ದೇವಸ್ಯ ಧೀಮಹಿ | ಧಿಯೋ ಯೋ ನಃ ಪ್ರಚೋದಯಾತ್ || ಓಂ ತಾƒಸವಿತುರ್ವರೇಣ್ಯಸ್ಯ ಚಿತ್ರಾಮಾಹƒವ್ವೃಣೇ ಸುಮತಿಂ ವಿಶ್ವಜನ್ಯಾಂ|
     ಯಾಮಸ್ಯ ಕಣ್ವೋ ಅದುಹತ್ಪ್ರಪೀನಾƒ ಸಹಸ್ರಧಾರಾಂ ಪಯಸಾ ಮಹೀಂ ಗಾಂ ||
  ಓಂ ವಿಶ್ವಾನಿ ದೇವಸವಿತರ್ದುರಿತಾನಿ ಪರಾ ಸುವ | ಯದ್ಭದ್ರಂ ತನ್ನ ಆಸುವ || {ಏಭಿಃ ತ್ರಿಮಂತ್ರೈಃ ವೇಣುನಲಿಕಯಾ ಅಗ್ನಿಂ ಪ್ರಜ್ವಾಲ್ಯ}

೭)  ಅಗ್ನಿಪುರುಷ ಧ್ಯಾನಂ -
ಚತ್ವಾರಿಶೃಂಗ ಇತ್ಯಸ್ಯ ಮಂತ್ರಸ್ಯ ವಾಮದೇವ ಋಷಿಃ ತ್ರಿಷ್ಟುಪ್ ಛಂದಃ  ಯಜ್ಞಪುರುಷೋ ದೇವತಾ ಧ್ಯಾನೇ ವಿನಿಯೋಗಃ -
 ಓಂ ಚತ್ವಾರಿಶೃಂಗಾ ತ್ರಯೋ ಅಸ್ಯ ಪಾದಾ ದ್ವೇ ಶೀರ್ಷೇ ಸಪ್ತಹಸ್ತಾಸೋ ಅಸ್ಯ | ತ್ರಿಧಾಬದ್ಧೋ ವೃಷಭೋ ರೋರವೀತಿ ಮಹೋದೇವೋ ಮƒರ್ತ್ಯಾಂ ಆವಿವೇಶ ||
     ಸ್ಮೃತಿಮಂತ್ರಾಶ್ಚ - ಸಪ್ತಜಿಹ್ವಂ ತ್ರಿಪಾದಂಚ ಸಪ್ತಹಸ್ತಂ ದ್ವಿನಾಸಿಕಂ |
     ಚತುರ್ವಕ್ತ್ರಂ ಷಳಕ್ಷಂ ಚ ಚತುಃಶೃಂಗಂ ದ್ವಿಶೀರ್ಷಕಂ ||
     ಸ್ವಾಹಾಂ ತು ದಕ್ಷಿಣೇ ಪಾರ್ಶ್ವೇ ದೇವೀಂ ವಾಮೇ ಸ್ವಧಾಂ ತಥಾ | 
     ಬಿಭ್ರಾಣಂ ದಕ್ಷಿಣೈಃ ಹಸ್ತೈಃ ಶಕ್ತಿಮಿಧ್ಮಂ ಸ್ರುವಂ ಸ್ರುಚಂ ||
     ತೋಮರಂ ವ್ಯಜನಂ ವಾಮೇ ಘೃತಪಾತ್ರಂ ತಥೈವ ಚ |
     ಮೇಷಾರೂಢಂ ಸುಖಾಸೀನಂ ಜಟಾಮುಕುಟಮಂಡಿತಂ ||
     ಸ್ವಾತ್ಮಾಭಿಮುಖಮಾಸೀನಂ ಧ್ಯಾಯೇದ್ದೇವಂ ಹುತಾಶನಂ ||

೮)  ಅಗ್ನಿ ಸಮ್ಮುಖೀಕರಣಂ -
ಏಷೋಹ ದೇವ ಇತ್ಯಸ್ಯ ಮಂತ್ರಸ್ಯ ಪ್ರಜಾಪತಿಃ ಋಷಿಃ ತ್ರಿಷ್ಟುಪ್ ಛಂದಃ ಪಮಾತ್ಮಾ ದೇವತಾ ಅಗ್ನಿ ಸಮ್ಮುಖೀಕರಣೇ ವಿನಿಯೋಗಃ ||
     ಓಂ ಏಷೋಹ ದೇವಃ ಪ್ರದಿಶೋನು ಸರ್ವಾಃ ಪೂರ್ವೋ ಹ ಜಾತಃ ಸ ಉ ಗರ್ಭೇ ಅಂತಃ |
     ಸ ಏವ ಜಾತಃ ಸಜನಿಷ್ಯಮಾಣಃ ಪ್ರತ್ಯಙ್ಜನಾಸ್ತಿಷ್ಠತಿ ಸರ್ವತೋ ಮುಖಃ ||
     ಭೋ ಅಗ್ನೇ ಶಾಂಡಿಲ್ಯ ಗೋತ್ರ ಮೇಷಾರೋಢ ಪ್ರಾಂಗ್ಮುಖ ದೇವ ಮಮ ಸಮ್ಮುಖೋ ಭವ | ಇತಿ ಸಾಕ್ಷತೋದಕಪಾಣಿಭ್ಯಾಂ ಅಗ್ನಿಂ ಅಭಿಮುಖೀ ಕೃತ್ಯ ಪರಿಷೇಚನಂ || ತತಃ ಗಂಧಪುಷ್ಪಾಕ್ಷತಾನ್ ಗೃಹೀತ್ವಾ ಪ್ರಾಗಾದಿ ದಿಕ್ಷು ಪೂಜಯೇತ್ ||

೯)  ಅಗ್ನ್ಯಲಂಕರಣಂ -
    ಓಂ ಅಗ್ನಯೇ ನಮಃ, ಓಂ ಹುತವಾಹನಾಯ ನಮಃ, ಓಂ ಹುತಾಶನಾಯ ನಮಃ, ಓಂ ಕೃಷ್ಣವರ್ತ್ಮನೇ ನಮಃ,
 ಓಂ ಸಪ್ತಜಿಹ್ವಾಯ ನಮಃ, ಓಂ ವೈಶ್ವಾನರಾಯ ನಮಃ, ಓಂ ಜಾತವೇದಸೇ ನಮಃ, ಓಂ ಯಜ್ಞಪುರುಷಾಯ ನಮಃ. - ಗಂಧಪುಷ್ಪಾಕ್ಷತಾನ್ ಸಮರ್ಪಯಾಮಿ || ತತಃ ಅಗ್ನಿಂ ಪ್ರಜ್ವಾಲ್ಯ | ಚರುಂ ಅಭಿಘಾರ್ಯ | ಗಾಯತ್ರ್ಯಾ ಅನ್ನಂ ಪ್ರೋಕ್ಷ್ಯ | ಮುಖಂ ಯಃ ಸರ್ವದೇವಾನಾಂ ಹವ್ಯಭುಕ್ಕವ್ಯಭುಕ್ತಥಾ |ಪಿತೄಣಾಂ ಚ ನಮಸ್ತಸ್ಮೈ ವಿಷ್ಣವೇ ಪಾವಕಾತ್ಮನೇ || ಇತಿ ಸ್ವಾಹಾಕಾರೇಣ ಜುಹುಯಾತ್ | ದಕ್ಷಿಣಜಾನ್ವಾ ಚ ಹೃದಿ ಸವ್ಯ ಹಸ್ತಂ ನಿಧಾಯ ಪ್ರದೀಪ್ತಾಗ್ನೌ ಬಾದರಿಕಪ್ರಮಾಣಮೋದನಂ ಆದಾಯ ದೇವತೀರ್ಥೇನ ಜುಹುಯಾತ್ |

೧೦)  ಆಹುತಯಃ
      ಓಂ ಓಂ ನಮೋ ನಾರಾಯಣಾಯ ಸ್ವಾಹಾ, ಓಂ ನಮೋ ನಾರಾಯಣಾಯ ಇದಂ ನ ಮಮ - ೧೨ ಆಹುತಿ
      ಓಂ ಕ್ಲೀಂ ಕೃಷ್ಣಾಯ ಸ್ವಾಹಾ, ಓಂ ಕ್ಲೀಂ ಕೃಷ್ಣಾಯ ಇದಂ ನ ಮಮ - ೦೬ ಆಹುತಿ
  ಓಂ ಬ್ರಹ್ಮಣೇ ಸ್ವಾಹಾ ಓಂ ಬ್ರಹ್ಮಣೆ ಇದಂ ನ ಮಮ -೧
      ಓಂ ಪ್ರಜಾಪತಯೇ ಸ್ವಾಹಾ, ಓಂ ಪ್ರಜಾಪತಯೇ ಇದಂ ನ ಮಮ -೧
      ಓಂ ಗೃಹ್ಯಾಭ್ಯಃ ಸ್ವಾಹಾ, ಓಂ ಗೃಹ್ಯಾಭ್ಯೋ ಇದಂ ನ ಮಮ -೧
      ಓಂ ಕಶ್ಯಪಾಯ ಸ್ವಾಹಾ, ಓಂ ಕಶ್ಯಪಾಯ ಇದಂ ನ ಮಮ -೧
      ಓಂ ಅನುಮತಯೇ ಸ್ವಾಹಾ, ಓಂ ಅನುಮತಯೇ ಇದಂ ನ ಮಮ -೧
      ಓಂ ವಿಶ್ವೇಭ್ಯೋ ದೇವೇಭ್ಯಃ ಸ್ವಾಹಾ ಓಂ ವಿಶ್ವೇಭ್ಯೋ ಇದಂ ನ ಮಮ -೧
      ಓಂ ಅಗ್ನಯೇ ಸ್ವಿಷ್ಟಕೃತೇ ಸ್ವಾಹಾ, ಓಂ ಅಗ್ನಯೇ ಸ್ವಿಷ್ಟಕೃತೇ ಇದಂ ನ ಮಮ -೧

೧೧)  ವ್ಯಾಹೃತಿ ಹೋಮಃ- (ಆಜ್ಯಹುತಿ)
      ಓಂ ಭೂಃ ಸ್ವಾಹಾ, -೧
      ಓಂ ಭುವಃ ಸ್ವಾಹಾ, -೧
      ಓಂ ಸ್ವಃ ಸ್ವಾಹಾಃ,  -೧
      (ಷೋಡಷೋಪಚಾರಪೂಜಾಃ ಸಮರ್ಪ್ಯ)

೧೨)  ಹುತಭಸ್ಮಧಾರಣಂ -
ಮಾನಸ್ತೋಕೇತ್ಯಸ್ಯ ಮಂತ್ರಸ್ಯ ಕುತ್ಸಃ ಋಷಿಃ ರುದ್ರೋ ದೇವತಾ ಜಗತಿ ಛಂದಃ ವಿಭೂತಿಗ್ರಹಣೇ ವಿನಿಯೋಗಃ 
      ಮಾನಸ್ತೋಕೇ ತನಯೇ ಮಾನ ಆಯೌ ಮಾನೋ ಗೋಷು ಮಾನೋ ಅಶ್ವೇಷು ರೀರಿಷಃ | ಮಾನೋ ವೀರಾನ್ರುದ್ರಭಾಮಿನೋ ವಧೀರ್ಹವಿಷ್ಮಂತಃ ಸದಮಿತ್ವಾ ಹವಾಮಹೇ ||
      ಓಂ ಕಶ್ಯಪಶ್ಯ ತ್ರ್ಯಾಯುಷಂ (ಇತಿ ಲಲಾಟೇ), ಓಂ ಜಮದಗ್ನೇಸ್ತ್ರ್ಯಾಯುಷಂ ( ಇತಿ ಕಂಠೇ),
      ಓಂ ಯದ್ದೇವಾನಾಂ ತ್ರ್ಯಾಯುಷಂ (ಇತಿ ಬಾಹ್ವೋಃ), ಓಂ ತನ್ಮೇ ಅಸ್ತು ತ್ರ್ಯಾಯುಷಂ (ಇತಿ ಹೃದಿ),
      ಓಂ ಶತಾಯುಷಂ ಬಲಾಯುಷಂ (ಇತಿ ಶಿರಸಿ), ಓಂ ಸ್ವಸ್ತಿ ಶ್ರದ್ಧಾಂ ಮೇಧಾಂ ಯಶಃ ಪ್ರಜ್ಞಾಂ ವಿದ್ಯಾಂ ಬುದ್ಧಿಂ ಶ್ರಿಯಂ ಬಲಂ | ಆಯುಷ್ಯಂ ತೇಜಃ ಆರೋಗ್ಯಂ ದೇಹಿ ಮೇ ಹವ್ಯವಾಹನ || ಇತಿ ನಮಸ್ಕಾರಂ ಕೃತ್ವಾ |

೧೩)  ಗೋತ್ರಾಭಿವಾದನಂ -
 ..... ತ್ರಿ/ಪಂಚ/ಸಪ್ತ ಋಷಯಾನ್ವಿತ ....ಗೋತ್ರೋದ್ಭವ ಕಾತ್ಯಾಯನಸೂತ್ರೀಯ
      ಶುಕ್ಲಯರ್ವೇದಾಂತರ್ಗತ ಕಣ್ವಶಾಖಾಧ್ಯಾಯೀ ......ಶರ್ಮಾ ಅಹಂ ಭೋ ಅಗ್ನೇ ಅಭಿವಾದಯಾಮಿ,

೧೪)  ಯಸ್ಯ ಸ್ಮೃತ್ಯಾ ಚ ನಾಮೋಕ್ತ್ಯಾ ತಪಃ ವೈಶ್ವದೇವ ಕ್ರಿಯಾದಿಷು |
      ನ್ಯೂನಂ ಸಂಪೂರ್ಣತಾಂ ಯಾತಿ ಸದ್ಯೋ ವಂದೇ ತಮಚ್ಯುತಂ ||
      ಮಂತ್ರಹೀನಂ ಕ್ರಿಯಾಹೀನಂ ಭಕ್ತಿಹೀನಂ ರಮಾಪತೇ |
      ಯತ್ಕಿಂಚಿತ್ ಕ್ರಿಯತೇ ಕರ್ಮ ತತ್ಕರ್ಮ ಸಫಲಂ ಕುರು ||

೧೫)  ಅನೇನ ಪ್ರಾತ/ಸಾಯಂ ಕಾಲೇ ಆಚರಿತ ವೈಶ್ವದೇವಾಖ್ಯೇನ ಕರ್ಮಣಾ ಅಗ್ನ್ಯಂತರ್ಗತ ಭಾರತೀರಮಣ ಮುಖ್ಯಪ್ರಾಣಾಂತರ್ಗತ ಹರಿಣೀಪತಿ ಪರಶುರಾಮಃ ಪ್ರೀಯತಾಂ |
      ಶ್ರೀಕೃಷ್ಣಾರ್ಪಣಮಸ್ತು.

೧೬)  ಅಚ್ಯುತ, ಅನಂತ, ಗೋವಿಂದ ಅಚ್ಯುತಾನಂತಗೋವಿಂದೇಭ್ಯೋ ನಮೋ ನಮಃ.           
   

 ಸಂಗ್ರಹಕಾರರು   
     ಶ್ರೀ ಗುರುರಾಜಾಚಾರ್ಯ ಕೃ. ಪುಣ್ಯವಂತ. ಹುಬ್ಬಳ್ಳ್.
     ಗೃಂಥ ಋಣ - ಶ್ರೀ ಕಾಣ್ವಾಚಾರ ದರ್ಶನ.
 

Sunday, July 7, 2013

ನಮಸ್ಕಾರ ಎಂದರೆ ಎನು? ಹೇಗೆ ? - Part 2

ಪ್ರಣಾಮವು ನಮ್ಮಲ್ಲಿರುವ ಅಹಂಕಾರವನ್ನು ಹೊಡೆದೋಡಿಸಿ, ನಾವು ನಮಸ್ಕಾರಾರ್ಹನಿಗಿಂತ ಸಣ್ಣವರು ಎನ್ನುವ ಭಾವನೆಯನ್ನು ಜಾಗೃತಗೊಳಿಸುತ್ತದೆ.  ಇಂತಹ ನಮಸ್ಕಾರದಲ್ಲಿ ಪುನಃ ನಾಲ್ಕುವಿಧಗಳಿವೆ. ಅವುಗಳೆಂದರೆ (1) ಭಕ್ತಿಪೂರ್ವಕ ನಮಸ್ಕಾರ (2) ಅಷ್ಟಾಂಗ ನಮಸ್ಕಾರ (3) ಪಂಚಾಂಗ ನಮಸ್ಕಾರ (4) ಅಭಿವಾದನ
ಎಂಬುದಾಗಿ.

 (1) ಭಕ್ತಿಪೂರ್ವಕ ನಮಸ್ಕಾರ :- ಗುರು ಹಿರಿಯರು, ದೇವಸ್ಥಾನ, ಹಸು, ಬ್ರಾಹ್ಮಣ ಮುಂತಾದವರು ಎದುರಾದಾಗ ಅವರಿಗೆ ಭಕ್ತಿಪೂರ್ವಕವಾಗಿ ನಮ್ಮ ಎರಡು ಕೈಗಳನ್ನು ಹೃದಯ ದಲ್ಲಿ ಜೋಡಿಸಿ ನಮಸ್ಕರಿಸಬೇಕೆ ಹೊರತು ಒಂದೇ ಕೈಯಿಂದ ಅಲ್ಲ. ಎಕೆಂದರೆ ಒಂದೇ ಕೈಯಿಂದ ನಮಸ್ಕರಿಸಿದವನಿಗೆ ಎನು ಮಾಡಬೇಕೆಂಬುದನ್ನು ಸ್ಮೃತಿ ಹೀಗೆ ಹೇಳುತ್ತಿದೆ
 ಎಕೇನ ಪಾಣಿನಾ ಯೇ ವೈ ಪ್ರಣಮೇತ್ ದೇವಮಚ್ಯುತಮ್|
 ತಸ್ಯ ದಂಡ ಕರಚ್ಛೇದಃ ಸ್ಮೃತಿಷು ಪ್ರತಿಪಾದಿತಃ||

ಎಂಬುದಾಗಿ. ಅಂದರೆ ಭಗವಂತ ನನ್ನು, ಗುರು-ಹಿರಿಯರನ್ನು ಒಂದೇ ಕೈಯಿಂದ ನಮಸ್ಕರಿಸಿದವನ ಕೈಯನ್ನು ಕತ್ತರಿಸುವುದೇ ವಿಧಿಸಬೇಕಾದ ದಂಡ ಎಂದು ಹೇಳುತ್ತದೆ. ಅಲ್ಲದೇ! ಒಂದೇ ಕೈಯಿಂದ ನಮಸ್ಕರಿಸುವುದು, ವಿಷ್ಣು ವಿಗೆ ಒಂದೇ ಪ್ರದಕ್ಷಿಣೆ ಹಾಕುವುದು ಹಾಗೂ ನಿಗದಿತ ಸಮಯ ಬಿಟ್ಟು, ಅಕಾಲದಲ್ಲಿ ವಿಷ್ಣುವಿನ ದರ್ಶನ ಮಾಡುವುದರಿಂದ ನಾವು ಹಿಂದೆ ಮಾಡಿದ ಪುಣ್ಯವು ನಾಶವಾಗುವುದು.

ಎಕಹಸ್ತಪ್ರಣಾಮಶ್ಚ ಎಕಾ ಚೈವ ಪ್ರದಕ್ಷಿಣಾ |
ಅಕಾಲದರ್ಶನಂ ವಿಷ್ಣೋಃ ಹಂತಿ ಪುಣ್ಯಂ ಪುರಾ ಕೃತಮ್ ||

ಎಂದು ವಿಷ್ಣುಸ್ಮೃತಿಯು ಹೇಳುತ್ತಿದೆ.
 ಆದುದರಿಂದ ನಮ್ಮ ಎರಡೂ ಕೈಗಳನ್ನು ಜೋಡಿಸಿ ನಮಸ್ಕರಿಸುವುದೇ ಭಕ್ತಿಪೂರ್ವಕ ನಮಸ್ಕಾರ. ಅಲ್ಲದೇ! ಇದು ಒಂದು ಹಿಂದೂಧರ್ಮದ ಶ್ರೇಷ್ಟತೆಯನ್ನು ಸಾರುವ ಸಂಕೇತ. ಎಕೆಂದರೆ ನಮ್ಮ ದೇಹ ಒಂದು ಶಕ್ತಿಯ ಕೇಂದ್ರ. ಇಂತಹ ದೇಹದಲ್ಲಿ ಶಕ್ತಿಯು ಯಾವತ್ತೂ ಮೇಲ್ಮುಖವಾಗಿ ಹರಿಯುತ್ತಿರುತ್ತದೆ, ಬತ್ತಿಗೆ ಹಚ್ಚಿದ ಬೆಂಕಿಯಂತೆ. ಆ ಬತ್ತಿಯನ್ನು ಯಾವ ರೀತಿ ಹಿಡಿದರೂ ಅದರ ತುದಿಯಲ್ಲಿರುವ ಬೆಂಕಿಯು ಮೇಲ್ಮುಖವಾಗಿ ಹರಿಯುವಂತೆ, ನಮ್ಮ ದೇಹದಲ್ಲಿರುವ ಶಕ್ತಿಯು ಮೇಲ್ಮುಖವಾಗಿ ಹರಿಯುತ್ತಿರುತ್ತದೆ. ಅಂತಹ ಶಕ್ತಿಯು ಹೊರಬರುವ ಮಾರ್ಗವೆಂದರೆ ಕೈಗಳ ಬೆರಳು ಮತ್ತು ಕಣ್ಣುಗಳ ಮುಖಾಂತರ. ಆ ಶಕ್ತಿಯನ್ನು ಹೊರಹಾಯಿ ಸದೇ ನಮ್ಮ ದೇಹದಲ್ಲಿಯೇ ಇರಗೊಟ್ಟರೆ ನಮ್ಮಲ್ಲಿರುವ ಜ್ಞಾನವು ಅಭಿವೃದ್ಧಿಯಾಗುತ್ತದೆ. ಆದುದರಿಂದ ಆ ಶಕ್ತಿಯನ್ನು ನಾವು ಎರಡೂ ಕೈ ಜೋಡಿಸಿ ನಮಸ್ಕರಿಸುವುದರ ಮೂಲಕ ನಮ್ಮಲ್ಲಿಯೇ ಇಟ್ಟುಕೊಳ್ಳಬೇಕು. ಅದು ಬಿಟ್ಟು ಆಂಗ್ಲರ ಸಂಪ್ರದಾಯದಂತೆ ನಮಸ್ಕಾರ ಮಾಡಿದರೆ ನಮ್ಮ ದೇಹ ದಲ್ಲಿರುವ ಶಕ್ತಿಯು ನಾವು ನಮಸ್ಕಾರ ಮಾಡಿದವರ ದೇಹಕ್ಕೆ ಹರಿದು, ಅದರಿಂದ ಅವರಿಗೆ ಹೆಚ್ಚಿನ ಲಾಭವಾಗುವ ಸಾಧ್ಯತೆಗಳಿವೆ. ಇದನ್ನು ಖ್ಟ್ಡ್ಛಿ  ಏಜಛಟ ಪದ್ಧತಿ ಎನ್ನುತ್ತಾರೆ. ಈ ಚಿಕಿತ್ಸೆಯಲ್ಲಿ ವೈದ್ಯನು ರೋಗಿಯ ಕೆಲವು ಅಂಗಗಳನ್ನು ಮುಟ್ಟಿ ತನ್ನ ಶಕ್ತಿಯನ್ನು ರೋಗಿಯ ದೇಹದೊಳಗೆ ಹರಿಸುವುದರ ಮೂಲಕ ರೋಗವನ್ನು ಗುಣಪಡಿಸು ತ್ತಾನೆ. ಇಂತಹ ಬಲವಾದ ಕಾರಣವಿರುವುದರಿಂದಲೇ ನಮ್ಮ ಪ್ರಾಚೀನರು ಯಾರಾದರೂ ಗುರು-ಹಿರಿಯರು ಎದುರಿಗೆ ಸಿಕ್ಕರೆ ಅವರಿಗೆ ಎರಡೂ ಕೈ ಜೋಡಿಸಿ ನಮಸ್ಕರಿಸುತ್ತಿದ್ದರು. ಇಲ್ಲವೇ ಪಾದ ಮುಟ್ಟಿ ನಮಸ್ಕರಿಸುತ್ತಿದ್ದರು. ಈ ಕ್ರಮದಲ್ಲಿ ಇನ್ನೂ ಒಂದು ವಿಶೇಷವಿದೆ, ಎನೆಂದರೆ - ಜ್ಞಾನವೃದ್ಧರು, ವಯೋವೃದ್ಧರು, ತಪಸ್ವಿಗಳು, ಸಾಧಕರಾದವರು ನಮ್ಮ ಹತ್ತಿರಕ್ಕೆ ಬಂದಾಗ ನಮ್ಮ ಪ್ರಾಣಶಕ್ತಿ ಮೇಲಕ್ಕೆ ಹಾರತೊಡಗುತ್ತದೆ. ಅಂತಹ ಸಮಯದಲ್ಲಿ ಬಂದಿರುವ ಸಾಧಕರಿಗೆ ಪಾದ ಮುಟ್ಟಿ ನಮಸ್ಕರಿಸುವುದರಿಂದ ನಮ್ಮ ಪ್ರಾಣಶಕ್ತಿಯನ್ನು ಹಿಂದಕ್ಕೆ ತರಬಹುದಾದ್ದರಿಂದ ನಾವು ಭಕ್ತಿಪೂರ್ವಕವಾಗಿ ಕೈ ಜೋಡಿಸಿ ಇಲ್ಲವೇ ಪಾದ ಮುಟ್ಟಿ ನಮಸ್ಕರಿಸಬೇಕು.

(2) ಅಷ್ಟಾಂಗ ನಮಸ್ಕಾರ :-

ಉರಸಾ ಶಿರಸಾ ದೃಷ್ಟ್ಯಾ ಮನಸಾ ವಚಸಾ ತಥಾ |
ಪದ್ಭ್ಯಾಂ ಕರಾಭ್ಯಾಂ ಜಾನುಭ್ಯಾಂ ಪ್ರಣಾಮೋಡಷ್ಟಾಂಗ ಈರಿತಃ ||

ಎಂದು ಹೇಳಿ ಈ ನಮಸ್ಕಾರವನ್ನು ಮಾಡುವಾಗ ನಮ್ಮ ದೇಹದ ಪ್ರಧಾನ ಅವಯವಗಳಾದ ಪಾದ, ಮಂಡಿ, ಭುಜಗಳು, ಕೈ, ಎದೆ ಮತ್ತು ಶಿರಸ್ಸು ಭೂಮಿಯಲ್ಲಿರಬೇಕು. ನಮ್ಮ ಕಣ್ಣು ಭಗವಂತನ ಮೂರ್ತಿಯನ್ನು ನೋಡುತ್ತಿರಬೇಕು. ಮನಸ್ಸು ಭಗವಂತನ ಧ್ಯಾನದಲ್ಲಿರ ಬೇಕು. ನಮ್ಮ ಬಾಯಿ ಭಗವಂತನ ಗುಣಗಾನ ಮಾಡುತ್ತಿರಬೇಕು. ಹೀಗೆ ಅಷ್ಟಾಂಗ ನಮಸ್ಕಾರ ಮಾಡಿದಾಗ ನಮ್ಮನ್ನು ಮತ್ತು ನಮ್ಮೆಲ್ಲ ಇಂದ್ರಿಯಗಳನ್ನು ಭಗವಂತನಿಗೆ ಸಂಪೂರ್ಣವಾಗಿ ಅರ್ಪಿಸಲು ಸಾಧ್ಯ.

(3) ಪಂಚಾಂಗ ನಮಸ್ಕಾರ :- ಸ್ತ್ರೀಯರು ದೇಹದಿಂದ, ಮಾತಿನಿಂದ, ಮನಃ ಪೂರ್ವಕವಾಗಿ, ಬುದ್ಧಿಪೂರ್ವಕವಾಗಿ, ಆತ್ಮಸಮರ್ಪಣ ಪೂರ್ವಕವಾಗಿ ಭಗವಂತನಿಗೆ ಅರ್ಪಿಸುವ ನಮಸ್ಕಾರ ಪಂಚಾಂಗ ನಮಸ್ಕಾರ ಎನಿಸುತ್ತದೆ.

 ಕಾಯೇನ ಮನಸಾ ವಾಚಾ ಬುದ್ಧ್ಯಾತ್ಮಾಭ್ಯಾಂ ತತಃ ಪರಂ |
 ಪಂಚಾಂಗೇನ ಕೃತಂ ಭಕ್ತ್ಯಾ ಪ್ರಣಾಮೋ ಪಂಚಾಂಗ ಈರಿತಃ ||
 

 ಇದು ಹಿಂದೆ ಹೇಳಿದಂತೆ ಸ್ತ್ರೀಯರು ಮಾಡಬೇಕಾದ ನಮಸ್ಕಾರವು.
(4) ಅಭಿವಾದನ :- ಶಿಷ್ಯನು ಗುರುವಿನ ಪಾದವನ್ನು ಮುಟ್ಟಿ ತನ್ನ ಗೋತ್ರವನ್ನು ಹೇಳಿ ಕೊಂಡು ಮಾಡುವ ನಮಸ್ಕಾರವೇ ಅಭಿವಾದನ. ಈ ನಮಸ್ಕಾರವನ್ನು ಮಾಡುವಾಗ ನಮ್ಮ ಎಡ-ಬಲ ಕೈಗಳಿಂದ ಕ್ರಮವಾಗಿ ಎಡ-ಬಲ ಕಿವಿಗಳನ್ನು ಮುಟ್ಟಿ ಸ್ವಗೋತ್ರವನ್ನು ಹೇಳಿ ಗುರುಗಳ ಪಾದವನ್ನು ಮುಟ್ಟುವಾಗ ಬಲಕೈಯಿಂದ ಬಲಪಾದವನ್ನು, ಎಡಕೈಯಿಂದ ಎಡಪಾದವನ್ನು ಮುಟ್ಟಿ ನಮಸ್ಕರಿಸಬೇಕು.  ಹೀಗೆ ಗುರುಗಳು ಎದುರಾದಾಗ ಅವಶ್ಯವಾಗಿ ಅಭಿವಾದನವನ್ನು ಮಾಡಲೇಬೇಕು. ಒಂದು ವೇಳೆ ಗುರುಗಳು, ದೇವಸ್ಥಾನ, ಬ್ರಾಹ್ಮಣ ಇವರನ್ನು ನೋಡಿಯೂ ನಮಸ್ಕರಿಸ ದವನು ಚಂದ್ರ-ಸೂರ್ಯರಿರುವ ತನಕ `ಕಾಲಸೂತ್ರ` ಎನ್ನುವ ನರಕವನ್ನು ಹೊಂದು ತ್ತಾನೆ ಎನ್ನುತ್ತದೆ ಒಂದು ಪ್ರಮಾಣ.


 ಆದುದರಿಂದ ಬ್ರಾಹ್ಮಣನೇ ಮೊದಲಾದ ಶ್ರೇಷ್ಠರು ಎದುರಾದಾಗ ಅವಶ್ಯವಾಗಿ ನಮಸ್ಕರಿಸಲೇಬೇಕು. ಆದರೆ ಕೆಲವೊಂದು ಸಂದರ್ಭದಲ್ಲಿ ಈ ಬ್ರಾಹ್ಮಣನೇ ಮೊದಲಾದ ಗುರು-ಹಿರಿಯರಿಗೆ ನಮಸ್ಕಾರ ಮಾಡಬಾರದು. ಇದು ಯಾವ ಸಂದರ್ಭದಲ್ಲಿ ಎಂದರೆ

 ವಿಪ್ರಂ ಸ್ನಾನಂ ಪ್ರಕುರ್ವಂತಂ ಸಮಿತ್ಕುಶಕರಂ ತಥಾ |
 ಉದಪಾತ್ರಂಧರಂ ಚೈವ ಭುಂಜಂತಂ ನಾಭಿವಾದಯೇತ್ || 
 ದೂರಸ್ಥಂ ಜಲಮಧ್ಯಸ್ಥಂ ಧಾವಂತಂ ಮದಗರ್ವಿತಂ |
 ಕ್ರೋಧವಂತಂ ವಿಜಾನೀಯಾತ್ ನಮಸ್ಕಾರಂ ಚ ವರ್ಜಯೇತ್ ||

 ಅಂದರೆ ಬ್ರಾಹ್ಮಣನು ಸ್ನಾನ ಮಾಡುತ್ತಿರುವಾಗ, ಶ್ರಾದ್ಧ ಮಾಡುತ್ತಿರುವಾಗ, ನೀರನ್ನು ಹೊತ್ತು ತರು ತ್ತಿರುವಾಗ, ಊಟ ಮಾಡುತ್ತಿರುವಾಗ, ದೂರದಲ್ಲಿರುವಾಗ, ನೀರಿನ ಮಧ್ಯದಲ್ಲಿರುವಾಗ, ಅವಸರದ ಕಾರ್ಯದಲ್ಲಿರುವಾಗ, ಕೋಪಾವಿಷ್ಟನಾಗಿರುವಾಗ ನಮಸ್ಕರಿಸಬಾರದು. ಅದರ ಲ್ಲೂ ಕೋಪಾವಿಷ್ಟನಾಗಿರುವಾಗ ಮಾತ್ರ ಅವಶ್ಯವಾಗಿ ನಮಸ್ಕರಿಸಲೇಬಾರದು. ಎಕೆಂದರೆ ಆಗ ಅನುಗ್ರಹಕ್ಕಿಂತ ಅವಗ್ರಹದ ಫಲವೇ ದೊರಕುವ ಸಾಧ್ಯತೆಯಿರುತ್ತದೆ. ಆದುದರಿಂದ ಇಂತಹ ಸಂದರ್ಭದಲ್ಲಿ ಯಾರೇ ಇರಲಿ ನಮಸ್ಕರಿಸಬಾರದು. ಇಷ್ಟೇ ಅಲ್ಲದೇ!

 ಸಭಾಯಾಂ ಯಜ್ಞಶಾಲಾಯಾಂ ದೇವಾಯತನೇಷು ಚ |
 ಪ್ರತ್ಯೇಕಂ ತು ನಮಸ್ಕಾರೇ ಹಂತಿ ಪುಣ್ಯಂ ಪುರಾಕೃತಂ ||

 ಸಭೆಯಲ್ಲಿ, ಯಜ್ಞ ಶಾಲೆಯಲ್ಲಿ, ದೇವಾಲಯಗಳಲ್ಲಿ ಪ್ರತ್ಯೇಕವಾಗಿ ನಮ್ಮ ಗುರುಗಳಿಗೆ ನಮಸ್ಕಾರ ಮಾಡ ಬಾರದು. ಎಕೆಂದರೆ ಸಭೆಯಲ್ಲಿ ಅನೇಕ ಪಂಡಿತರು, ಜ್ಞಾನಿಗಳು ಸೇರಿರುತ್ತಾರೆ. ಆ ಸಂದರ್ಭದಲ್ಲಿ ಅವರ ಮಧ್ಯೆಯಿರುವ ನಮ್ಮ ಗುರುಗಳಿಗೆ ಮಾತ್ರ ನಮಸ್ಕರಿಸಿದರೆ ಉಳಿದ ಗುರುಗಳನ್ನು, ಜ್ಞಾನಿಗಳನ್ನು ತಿರಸ್ಕರಿಸಿದಂತಾಗುತ್ತದೆ. ಆಗ ನಮ್ಮ ಗುರುಗಳಿಗೆ ನಮಸ್ಕರಿಸುವ ರಭಸದಲ್ಲಿ ನಾವು ಗಳಿಸುವ ಪುಣ್ಯ ಸಂಪಾದನೆಗಿಂತ ಪಾಪದ ಸಂಗ್ರಹವೇ ಹೆಚ್ಚಾದೀತು. ಆದುದರಿಂದ ಸಭಾ ಮಧ್ಯದಲ್ಲಿರುವ ಗುರುಗಳಿಗೆ ಆಗಲೇ ನಮಸ್ಕರಿಸದೇ ಸಭೆ ಮುಗಿದ ನಂತರ ಏಕಾಂತದಲ್ಲಿ ನಮಸ್ಕರಿಸಬೇಕು. ಇದರಿಂದ ಯಾವುದೇ ರೀತಿಯ ಪ್ರಮಾದಕ್ಕೆ ಅವಕಾಶವಿಲ್ಲ.

ನಮಸ್ಕರಿಸಿದಾಗ ಆಶೀರ್ವಾದ ಮಾಡಲೇಬೇಕು
 ಶಿಷ್ಯನು ಗುರುಗಳಿಗೆ ನಮಸ್ಕರಿಸಿದಾಗ ಅವಶ್ಯವಾಗಿ ಅವನ ಯೋಗ್ಯತೆಗೆ ತಕ್ಕಂತೆ ಆಶೀವರ್ಾದವನ್ನು ಮಾಡಲೇಬೇಕು. ಒಂದು ವೇಳೆ ಆಶೀರ್ವಾದವನ್ನು ಮಾಡದಿದ್ದರೆ ಯಾರು ನಮಸ್ಕಾರವನ್ನು ಮಾಡಿರುತ್ತಾರೆಯೋ ಅವರ ಪಾಪದ ಫಲಕ್ಕೆ ನಮಸ್ಕರಿಸಿ ಕೊಂಡ ವ್ಯಕ್ತಿಯು ಪಾಲುಗಾರನಾಗುತ್ತಾನೆ. ಮತ್ತು ಆಶೀರ್ವಾದ ಮಾಡದವನ ಆಯುಷ್ಯ ನಮಸ್ಕರಿಸಿದವನಿಗೆ ಸೇರುತ್ತದೆ. ಆದುದರಿಂದ ಆಶೀರ್ವಾದ ಮಾಡಲೇಬೇಕು. ಅಷ್ಟೇ ಅಲ್ಲ! ನಮಸ್ಕಾರ ಮಾಡುವುದಕ್ಕಿಂತ ಮೊದಲೇ ಆಶೀರ್ವಾದವನ್ನು ಮಾಡಲು ಪ್ರಾರಂಭಿ ಸಿರಬೇಕು. ಇದರಿಂದ ಉತ್ತಮ ಫಲವಿದೆ. ಈ ರೀತಿಯಾಗಿ ಉತ್ತಮ ಫಲ ಪಡೆದವರಲ್ಲಿ ಸಾವಿತ್ರಿ, ಮಾರ್ಕಂಡೇಯ ಋಷಿ ಮೊದಲಾದವರು ಸೇರಿದ್ದಾರೆ.

ನಮಸ್ಕಾರದ ಫಲ:

 ನಾವು ಹಿರಿಯರಿಗೆ ನಮಸ್ಕರಿಸಿದರೆ ನಮಗೆ ಧೀರ್ಘಾಯುಷ್ಯ, ವಿದ್ಯೆ, ಕೀರ್ತಿ, ಶಾರೀರಿಕ ಬಲಗಳು ಪ್ರಾಪ್ತವಾಗುತ್ತವೆ ಎಂದು ಈ ಶ್ಲೋಕ ಈ ರೀತಿ ಹೇಳುತ್ತಿದೆ.

 ಅಭಿವಾದನಶೀಲಸ್ಯ ನಿತ್ಯಂ ವೃದ್ಧೋಪಸೇವಿನಃ |
 ಚತ್ವಾರಿ ತಸ್ಯ ವರ್ಧಂತೇ ಆಯುರ್ವಿದ್ಯಾಯಶೋಬಲಮ್ ||

  ಎಂಬುದಾಗಿ. ಇಂತಹ ನಮಸ್ಕಾರಕ್ಕೆ ಧರ್ಮರಾಜನು ಮಾದರಿಯಾಗಿದ್ದ. ಮಹಾಭಾರತ ಯುದ್ಧ ಪ್ರಾರಂಭವಾಗುವುದಕ್ಕಿಂತ ಮುಂಚೆ ಪಿತಾಮಹರಾದ ಭೀಷ್ಮಾಚಾರ್ಯ, ದ್ರೋಣ, ಕೃಪ, ಶಲ್ಯ ಮೊದಲಾದವರಿಗೆ ನಮಸ್ಕರಿಸಿ `ಆಯುಷ್ಮಾನ್ ಭವ` `ವಿಜಯೀ ಭವ` ಎಂದು ಆಶೀರ್ವಾದ ಪಡೆದ. ಯುದ್ಧದಲ್ಲಿ ವಿಜಯಿಯೂ ಆದ ಘಟನೆ ನಮಗೆಲ್ಲರಿಗೂ ಗೊತ್ತೇ ಇದೆ. ಇಂತಹ ಉತ್ಕೃಷ್ಟ ಫಲವಿರುವುದರಿಂದಲೇ ಅವಶ್ಯವಾಗಿ ಗುರು-ಹಿರಿಯರು ಕಂಡಾಗ ಅವಶ್ಯವಾಗಿ ನಮಸ್ಕರಿಸಲೇಬೇಕು.
ಭಗವಂತನಿಗೆ ನಮಸ್ಕರಿಸುವ ಕ್ರಮ.   ವರಾಹಪುರಾಣ ನಾವು ಭಗವಂತನಿಗೆ ಹೇಗೆ ನಮಸ್ಕರಿಸಬೇಕೆಂಬುದನ್ನು ಹೀಗೆ ಹೇಳುತ್ತದೆ.  ಭಗವಂತನಿಗೆ ನಮಸ್ಕರಿಸಬೇಕಾದಾಗ ಮೊದಲು ಎಡಗಾಲಿನ ಮಂಡಿಯನ್ನು ಊರ ಬೇಕು. ಆನಂತರ ಎರಡೂ ಕೈಗಳನ್ನು ನೆಲದ ಮೇಲಿಟ್ಟು ಬಲಗಾಲಿನ ಮಂಡಿಯನ್ನು ಊರಬೇಕು. ಆನಂತರ ಹಣೆಯನ್ನು ಭೂಮಿಗೆ ತಾಗಿಸಿ ತಲೆ ಮೇಲುಗಡೆ ಕೈಗಳನ್ನು ಗುಣಾ ಕಾರದ ಚಿಹ್ನೆಯಂತೆ ಜೋಡಿಸಿ ಅಂದರೆ ನಮ್ಮ ಬಲ ಕೈ ದೇವರ ಬಲಪಾದವನ್ನು, ಎಡ ಕೈ ದೇವರ ಎಡಪಾದವನ್ನು ತಾಕುತ್ತಿರುವಂತೆ ಮಾಡಿ ಮಸ್ಕರಿಸಬೇಕು.

 ಈ ರೀತಿ ಭಕ್ತನು ಭಗವಂತನಿಗೆ ದಂಡ ಪ್ರಣಾಮವನ್ನು ಮಾಡಿದರೆ ಅವನೊಂದಿಗೆ ಪಾಪಗಳು ಮೇಲೆಳುವುದಿಲ್ಲ. ಆದುದರಿಂದ ಪುರುಷರು ಸಾಷ್ಟಾಂಗ ಕ್ರಮದಿಂದ, ಸ್ತ್ರೀ ಯರು ಪಂಚಾಂಗಕ್ರಮದಿಂದ ಈ ರೀತಿಯಾಗಿ ನಮಸ್ಕರಿಸಬೇಕು. ಅಷ್ಟೇ ಅಲ್ಲದೇ! ಶನಿ ದೇವರ ದೇವಸ್ಥಾನಕ್ಕೆ ಹೋದಾಗ ಪುರುಷರು ಸಾಷ್ಟಾಂಗ ಕ್ರಮದಿಂದ, ಸ್ತ್ರೀಯರು ಪಂಚಾಂಗಕ್ರಮದಿಂದ ನಮಸ್ಕರಿಸಬಾರದು. ಅಲ್ಲಿ ಮಾತ್ರ ನಿಂತುಕೊಂಡೇ ನಮಸ್ಕರಿಸ ಬೇಕು. ಏಕೆಂದರೆ ಶನಿದೇವನು ವಕ್ರದೃಷ್ಟಿಯುಳ್ಳವನಾದ್ದರಿಂದ ಅವನ ದೃಷ್ಟಿಯು ಯಾವಾಗಲೂ ನೇರವಾಗಿ ಇರದೇ ಭೂಮಿಯ ಕಡೆಗೆ ಇರುತ್ತದೆ. ನಾವು ಒಂದು ವೇಳೆ ಸಾಷ್ಟಾಂಗ, ಪಂಚಾಂಗಕ್ರಮದಿಂದ ನಮಸ್ಕರಿಸಿದರೆ ಶನಿದೇವನ ವಕ್ರದೃಷ್ಟಿ ನಮ್ಮ ಮೇಲೆ ಬೀಳುವುದು. ಶನಿದೇವನ ವಕ್ರದೃಷ್ಟಿಯಿಂದ ತಪ್ಪಿಸಿಕೊಳ್ಳಲು ಅಲ್ಲಿ ನಿಂತುಕೊಂಡೇ ನಮಸ್ಕರಿಸಬೇಕು.

ನಮಸ್ಕಾರ ಎಲ್ಲಿ, ಹೇಗೆ ಮಾಡಬೇಕು

 ದೇವಾಲಯಗಳಲ್ಲಿ ಸಿಕ್ಕ ಸಿಕ್ಕ ಕಡೆ ನಮಸ್ಕರಿಸಬಾರದು. ಯಾವ ದೇವಸ್ಥಾನದಲ್ಲಿ ಯೇ ಆಗಲಿ ದೇವರ ಬಲಭಾಗದಲ್ಲಿಯೇ ನಮಸ್ಕರಿಸಬೇಕು. ಅಥವಾ ನಮ್ಮ ಬಲಭಾಗಕ್ಕೆ ದೇವರು, ದೇವರ ಬಲಭಾಗಕ್ಕೆ ನಾವು ಇರುವಂತೆ ನಮಸ್ಕರಿಸಬೇಕು. ಏಕೆಂದರೆ
  ಅಗ್ರೇ ಪೃಷ್ಟೇ ವಾಮಭಾಗೇ ಸಮೀಪೇ ಗರ್ಭಮಂದಿರೇ |
  ಜಪಹೋಮನಮಸ್ಕಾರಾನ್ ನ ಕುರ್ಯಾತ್ ಕೇಶವಾಲಯೇ ||

 ಅಂದರೆ ವಿಷ್ಣುವಿನ ದೇವಾಲಯಗಳಲ್ಲಿ ದೇವರ ಎದುರುಗಡೆ, ಹಿಂಭಾಗದಲ್ಲಿ, ದೇವರ ಎಡಭಾಗದಲ್ಲಿ, ದೇವರ ಸಮೀಪದಲ್ಲಿ, ಗರ್ಭಗೃಹದಲ್ಲಿ ನಮಸ್ಕಾರ, ಜಪ, ಹೋಮಗಳನ್ನು ಮಾಡ ಬಾರದು. ಏಕೆಂದರೆ ವಿಷ್ಣು, ಶಿವಾಲಯಗಳಲ್ಲಿ ದೇವರ ಎದುರುಗಡೆ ನಾವು ನಮಸ್ಕರಿಸಿದಾಗ ನಮ್ಮ ಕಾಲು ಗರುಡ, ನಂದಿಯ ಕಡೆಗೆ ಇರುತ್ತದೆ. ಇದರಿಂದ ದೇವರ ಮುಂದೆ ಇರುವ ಗರುಡ, ನಂದಿ, ಮೂಷಿಕಾದಿ ದೇವತೆಗಳಿಗೆ ನಾವು ಕಾಲು ತೋರಿಸಿ ಅವರನ್ನು ತಿರಸ್ಕರಿಸಿ ದಂತಾಗುತ್ತದೆ. ಇದರಿಂದ ಪಾಪದ ಲೇಪವಾಗುವುದು. ಏಕೆಂದರೆ `ದೊಡ್ಡವರನ್ನು ತಿರಸ್ಕರಿಸುವುದು ಮರಣಕ್ಕೆ ಆಹ್ವಾನ ಕೊಟ್ಟಂತೆ.` ಇದೇ ಮಾತನ್ನು ಈ ಪ್ರಮಾಣ ಹೀಗೆ ಹೇಳುತ್ತದೆ. `ಅಗ್ರೇ ಮೃತ್ಯುಮವಾಪ್ನೋತಿ` ಎಂಬುದಾಗಿ. ಅಲ್ಲದೇ ಬಲಿಪೀಠ, ಧ್ವಜ ಸ್ತಂಭಗಳಿಗೆ ಪಾದವನ್ನು ತೋರಿಸಬಾರದು. ಆದುದರಿಂದ ದೇವರ ಎದುರಿಗೆ ನಮಸ್ಕರಿಸಬಾರದು.

 ದೇವರ ಮುಂಭಾಗದಂತೆ ಹಿಂಭಾಗದಲ್ಲಿಯೂ ನಮಸ್ಕರಿಸಬಾರದು. ಏಕೆಂದರೆ ಅಲ್ಲಿ ದೇವರ ಪರಿವಾರದೇವತೆಗಳಿರುತ್ತಾರೆ. ಹಿಂಭಾಗದಲ್ಲಿ ನಮಸ್ಕರಿಸಿದಾಗ ಆ ದೇವತೆ ಗಳಿಗೆ ಪಾದ ತೋರಿಸಿದಂತಾಗುವುದರಿಂದ ನಾವು ಯಾವುದೇ ಕಾರ್ಯವನ್ನು ಮಾಡಲಿ ಅದರಲ್ಲಿ ಅಪಜಯ (ಸೋಲು) ವುಂಟಾಗುವುದು. ಆದುದರಿಂದ ದೇವರ ಹಿಂಭಾಗದಲ್ಲಿ ನಮಸ್ಕರಿಸಬಾರದು.
 ದೇವರ ಎಡಭಾಗದಲ್ಲಿಯೂ ನಮಸ್ಕರಿಸಬಾರದು. ಏಕೆಂದರೆ `ವಾಮಭಾಗೇ ಭವೇನ್ನಾಶಃ` ಎಂದು ಹೇಳಿರುವುದರಿಂದ ದೇವರ ಎಡಭಾಗದಲ್ಲಿ ನಮಸ್ಕರಿಸಬಾರದು. ಏಕೆಂದರೆ ದೇವರ ಎಡಕೈಯಲ್ಲಿ ಗದಾ, ತ್ರಿಶೂಲ ಮೊದಲಾದ ಆಯುಧಗಳಿರುತ್ತವೆ. ಆ ಆಯುಧಗಳನ್ನು ಪರಮಾತ್ಮನು ಧರಿಸಿರುವುದರ ಉದ್ದೇಶ ಶತ್ರುಗಳ ನಾಶಕ್ಕಾಗಿ. ಒಂದು ವೇಳೆ ನಾವು ದೇವರ ಎಡಭಾಗದಲ್ಲಿ ನಮಸ್ಕರಿಸುವುದರಿಂದ ಭಗವಂತನ ಆಯುಧ ಗಳಿಂದ ನಮ್ಮ ಶರೀರದ ನಾಶವಾಗುವ ಸಂಭವವಿರುವುದರಿಂದ ದೇವರ ಎಡಭಾಗದಲ್ಲಿ ನಮಸ್ಕರಿಸಬಾರದು ಎಂದು ಹೇಳಿ ಕೊನೆಗೆ ದೇವರ ಬಲಭಾಗದಲ್ಲಿಯೇ ನಮಸ್ಕರಿಸ ಬೇಕೆಂದು ಹೇಳುತ್ತಿದ್ದಾರೆ. `ದಕ್ಷಿಣೇ ಸರ್ವಕಾಮದಃ` ಎಂಬುದಾಗಿ. ಅಂದರೆ ನಾವು ಯಾವಾಗ ನಮಸ್ಕರಿಸಿದರೂ ದೇವರ ಬಲಭಾಗದಲ್ಲಿಯೇ ನಮಸ್ಕರಿಸಬೇಕು. ಏಕೆಂದರೆ ದೇವರು ನಮಗೆಲ್ಲರಿಗೂ ಅಭಯವನ್ನು, ಜ್ಞಾನವನ್ನು ನೀಡುವುದು ಬಲಗೈಯಿಂದಲೇ. ಆದುದರಿಂದ ಭಗವಂತನ ಅನುಗ್ರಹ, ಅಭಯವನ್ನು ಪಡೆಯಬೇಕಾದ ನಾವು ದೇವರ ಬಲಭಾಗದಲ್ಲಿಯೇ ನಮಸ್ಕರಿಸಬೇಕು.

To be continued...