Tuesday, June 25, 2013

ಉಡುಪಿ ಯಾತ್ರೆ-೨

ಉಡುಪಿ ಯಾತ್ರೆ-೨
~~~~~~~~~~~~
ಉಡುಪಿಗೆ ಹೂರಡುವದು ಪ್ಲವಂಗನಾಮ ಸಂವತ್ಸರದ ಪುಷ್ಯ ಬಹುಳ (೧) ಮಂಗಳವಾರ ದಿ|| ೧೬-೦೧-೧೯೬೮ನೇ ದಿವಸ ಅಂತಾ ಠರಾವು ಆಯಿತು. ಎಲ್ಲಾ ರಾಯಚೂರ ಜಿಲ್ಹೆಯ ಶಿಷ್ಯರ ಸಹಾಯದಿಂದಾ ಒಂದು ಜೀಪು ಖರೀದಿ ಮಾಡಲಾಯಿತು. ಮತ್ತು ವೇ|| ದೇವರು ಡಾಕ್ಟರ ಒಂದು ಕಾರು ತೆಗೆದುಕೂಂಡು (೪೦) ಜನರಿಂದಾ ಕೂಡಿಕೊಂಡು ಹೋಗುವದು ತಯ್ಯಾರ ಮಾಡಲಾಯಿತು. ಉಳಿದ ಶಿಷ್ಯರು ತಮ್ಮ ಅನಕೂಲ ಪ್ರಕಾರ ಪರಭಾರೆ ಬರುವದಾಗಿ ತಿಳಿಸಿದರು. ನಮ್ಮ ಸಂಗಡ ಉಡುಪಿಗೆ ಬರಲು ಆತುರರಾದ ಶಿಷ್ಯರು (೫೦೦) ಆಗಬಹುದೆಂದು ಅಂದಾಜು ಮಾಡಲಾಯಿತು. ನಾವು ಉಡುಪಿಗೆ ಹೋಗುವದನ್ನು ಎಲ್ಲಾ ಪ್ರಮುಖ ಸ್ತಳಗಳಿಗೆ ಟಪಾಲುದ್ವಾರಾ ತಿಳಿಸಲಾಯಿತು. ನಮ್ಮ ಸಂಗಡ ಬರುವ ಎಲ್ಲರೂ ಪುಷ್ಯ ಶುದ್ಧ ೧೫ ಸೋಮವಾರ ದಿವಸ ಸಾಯಂಕಾಲಕ್ಕೆ ದೇವದುರ್ಗಕ್ಕೆ ಬರಬೇಕು ಅಂತಾ ತಿಳಿಸಲಾಯಿತು. ಆ ಪ್ರಕಾರ ಎಲ್ಲರೂ ಪೌರ್ಣಿಮಾ ಸಾಯಂಕಾಲಕ್ಕೆ ದೇವದುರ್ಗಕ್ಕೆ ಬಂದುಬಿಟ್ಟರು. ಪ್ರತಿಪದಾ ದಿವಸ ಮುಂಜಾನೆ ಪೊಜಾ, ತೀರ್ಥ, ಪ್ರಸಾದ ಮುಗಿಸಿಕೊಂಡು ಹಗಲು ೦೪-೦೦ ಘಂಟೆಗೆ ತನ್ನ ಮೊಲ ಪೀಠಕ್ಕೆ ಹೊಗಬೆಕೆಂಬ ಸತ್ಯ ಸಂಕಲ್ಪದ ಶ್ರೀ ಹರಿಯು ತನ್ನ ಭಕ್ತವ್ರಂದದೊಡನೆ ದೇವದುರ್ಗದಿಂದಾ ಹೊರಟುಬಿಟ್ಟನು. ಮೊದಲೇ ನಿಶ್ಚ್ಯಯ ಮಾಡಿದ ಪ್ರಕಾರ ಅವತ್ತು ಸಾಯಂಕಾಲಕ್ಕೆ ದೇಸಾಯಿ ಕ್ಯಾಂಪಿಗೆ ರಾತ್ರಿ ೦೯-೦೦ ಘಂಟೆಗೆ ಹೋಗಿ ಸಾಯಂಕಾಲದ ಮಂಗಳಾರತಿ ಫಲಹಾರ ವಗೈರೆ ಮುಗಿಸಿ ವಿಶ್ರಾಂತಿ ತೆಗೆದುಕೊಂಡು ಬೆಳಗಮುಂಜಾನೆ ೦೪-೦೦ ಘಂಟೆಗೆ ಎದ್ದು ಬುಧವಾರ ದಿವಸ ಮುಂಜಾನೆ ೦೯-೦೦ ಘಂಟೆಗೆ ಮುನಿರಾಬಾದಕ್ಕೆ ಬಂದೆವು. ಮುನಿರಾಬಾದನಲ್ಲಿ ಪಾದ ಪೊಜಾ,ಮತ್ತು ಸಂಜಾತಭಿಕ್ಷೆ ಮುಗಿಸಿಕೂಂಡು ೦೪-೦೦ಘಂಟೆಗೆ ಹೂರಟು ರಾತ್ರಿ ಹತ್ತು(೧೦-೦೦)ಘಂಟೆಗೆ ಹರಿಹರಕ್ಕೆ ಬಂದೆವು. ಅಲ್ಲಿ ಹರಿಹರ ದೇವರ ದರ್ಶನ ತೆಗೆದುಕೊಂಡು, ಮುಂದೆ ಸ್ವಲ್ಪದೂರ ಹೂಗಲು ಕಾರು ಕೆಟ್ಟು ನಿಂತಿತು. ಒಂದು ಜೀಪು,ಕಾರು ಅಲ್ಲೆ ಬಿಟ್ಟು ಶ್ರೀಗಳು, ಶೀನಪ್ಪಯ್ಯಾ, ವೇ||ವೆಂಕಪ್ಪಯ್ಯನವರು ಹಾಗೆ ಹೂರಟು ದಿ||೧೮-೦೧-೧೯೬೮ನೆ ಮುಂಜಾನೆ ಎಂಟು ಘಂಟೆಗೆ ಭಂಡಾರಕೇರಿಗೆ ಹೂದೆವು. ಅಲ್ಲಿಯ ವಿದ್ಯಮಾನ್ಯ ಶ್ರೀಗಳವರಿಂದಾ ಸ್ವಾಗತ ಸ್ವೀಕಾರಮಾಡಿಕೂಂಡು ಸ್ವಲ್ಪವೇಳೆ ವಿಶ್ರಾಂತಿ ತೆಗೆದುಕೂಂಡು, ಮುಂದೆ ಪೂಜಾ, ನೇವೇದ್ಯ, ತೀರ್ಥ, ಪ್ರಸಾದ ವಗೈರೆ ಎಲ್ಲ ಕಾರ್ಯಗಳನ್ನು ಮುಂದಿನ ಪ್ರಯಾಣ ನಿಮಿತ್ಯ ಗಡಿಬಿಡಿಯಿಂದಾ ಮುಗಿಸಲಾಯಿತು.
ಎಲ್ಲವೂ ಮುಗಿದಮೇಲೆ ಭಂಡಾರಕೇರಿ ಶ್ರೀಗಳವರು ಫಲ ಪುಷ್ಪದೂಂದಿಗೆ ರೂ೨೦೧=೦೦ ಕಾಣಿಕೆ ಸಲ್ಲಿಸಿದರು. ಅವರು ನಾವು ಕೂಡಿಕೂಂಡು ನಾಲ್ಕು ಘಂಟೆಗೆ ಉಡುಪಿಗೆ ಹೂಗಲು ಹೂರಟೆವು. ಹಗಲು ೦೫-೩೦ಘಂಟೆಗೆ ಉಡುಪಿಗೆ ಹೂದೆವು. ಅಲ್ಲಿ ಒಂದು ಗುಡಿಯಲ್ಲಿ ಇಳಿಯಲು ಸ್ಥಳಮಾಡಿದ್ದರು ಗುಡಿಯ ಮಹಡಿಯಲ್ಲಿ ವಿಶ್ರಾಂತಿ ಆಯಿತು. ಪೇಜಾವರ ದಿವಾನ ಸುಬ್ಬರಾಯಭಟ್ಟರು ಇನ್ನು ಸ್ವಲ್ಪ ವೇಳೆಯಲ್ಲಿ ಕರೆದುಕೂಂಡು ಹೋಗುವದಾಗಿ ಹೇಳಿಹೋದರು. ಮತ್ತು ಚಿತ್ತಪೂರ ಶ್ರೀಗಳವರು ಅಲ್ಲಿಗೆ ಬಂದರು. ಅಂತೂ ಮೂವರು ಶ್ರೀಗಳವರ ಸಂಗಮವಾಯಿತು. ತ್ರೀ ಸನ್ಯಾಸಿಗಳು ಒಳ್ಳೆ ಹರ್ಷೂದ್ಗಾರಗಳಿಂದಾ ಒಬ್ಬರಿಗೊಬ್ಬರು ಪರಿಚಯ ಮಾಡಿಕೊಳ್ಳುತ್ತ ತಮ್ಮ ತಮ್ಮ ಮಠಗಳ ಆಡಳಿತ, ಕೇಳುತ್ತ ಹೇಳುತ್ತಾ ಒಳ್ಳೆ ಆನಂದದಲ್ಲಿ ಕಾಲಕ್ರಮೇಣ ಮಾಡಲಾಯಿತು. ನಾವು ಅಂದರೆ ಕಣ್ವ ಮಠದ ಶ್ರೀಗಳವರು ಬಂದ ವರ್ತಮಾನ ಎಲ್ಲಾಕಡೆಗೂ ಪಸರಿಸಿದ್ದರಿಂದಾ ನಮ್ಮ ಕಡಿಂದಾ ಮೂದಲೇ ನೀರೂಪತೆಗೆದುಕೂಂಡು ಬಂದ ಎಲ್ಲ ಶಿಷ್ಯ ಸಮೂಹವು ಬಂದು ನಮ್ಮನ್ನು ಕುಡಿಕೂಂಡಿತು. ರಾತ್ರಿ ಎಂಟು ಘಂಟೆ ಕಾಲಾವಧಿಯಲ್ಲಿ ಶ್ರೀಪೆಜಾವರ ಶ್ರೀಗಳಿಂದಾ ಮೆರವಣೆಗೆಗೋಸ್ಕರವಾಗಿ ವಿದ್ಯುದ್ವೀಪಗಳಿಂದ ಅಲಂಕರಿಸಿದ ಜೀಪು ಅಸಂಖ್ಯಲೈಟುಗಳು ವಾದ್ಯ ವೈಭವ ದ್ವಜಪತಾಕಗಳಿಂದಲು ಮತ್ತು ತಮ್ಮ ಪ್ರಮುಖ ಶಿಷ್ಯರನ್ನು ಕರೆಯಲು ಕಳಿಸಿಕೂಟ್ಟರು. ಸದರಿಯವರು ಫಲಪುಷ್ಪಗಳನ್ನು ಅರ್ಪಿಸಿ ನಮಸ್ಕಾರವಗೈರೆ ವಿಧಾನಗಳು ಮುಗಿದಮೇಲೆ ಮೂವರು ಶ್ರೀಗಳನ್ನು ಜೀಪದಲ್ಲಿ ಕೂಡ್ರಿಸಿ ಮೆರವಣಿಗೆಯು ಪ್ರಾರಂಭವಾಯಿತು. ವೈಕುಂಠದಲ್ಲಿ ನಮ್ಮ ಸ್ವಾಗತ, ಪೇಜಾವರ ಶ್ರೀಗಳವರು ಮಾಡುವರೆಂಬುದು ಎಲ್ಲವೂ ಮಿಥ್ಯವಾದದ್ದು. ರಜತ ಪೀಠಸ್ಥನಾದ ಶ್ರೀ ಹರಿಯು ತಾನೆ ವಿಠಲಕ್ರಿಷ್ಣನ ನಮಾಂಕಿತದಿಂದಾ ಕಣ್ವಪೀಠಕ್ಕೆಹೋಗಿದ್ದು ಎರಡುನೂರು ವರುಷದವರೆಗೂ ಇಲ್ಲಿಗೆ ಬರದೇ ಇದ್ದ ಮೂಲಕವಾಗಿ ಈಗ ತನ್ನ ಮೂಲಪಿಠಕ್ಕೆ ಬರಬೇಕೆಂಬ ಆತುರವಾಗಿ ವಿಠಲಕ್ರಿಷ್ಣನು ಇಲ್ಲಿಗೆ ಬರಲು ಪೀಠದಲ್ಲಿಯ ಕ್ರಿಷ್ಣನು ಸ್ವಾಗತಮಾಡುವದುಸಹಜವದೆ ಇಲ್ಲಿ ನಮಗೆ ಸ್ವಾಗತ ಮಾಡಿಸಿಕೂಳ್ಳಲು ಶಕ್ತರೇಅಲ್ಲ.
ಮುಂದೆ ಮಾರ್ಗದಲ್ಲಿ ಫಲಪುಷ್ಪ ಮಾಲಾರ್ಪಣೆ ಮತ್ತು ಮಂಗಳಾರತೆಗಳು ಆಗತಾಇದ್ದು ಅವುಗಳನ್ನೆಲ್ಲಾ ಅಂತರ್ಗತನಾದ ವಿಠಲಕ್ರಿಷ್ಣನ ಆಜ್ನಧಾರಕರಾಗಿ ಅವನಗೂಸಗ ಅವನ ಸೇವಕಭಾವದಲ್ಲಿ ಸ್ವೀಕರಿಸುತ್ತ ೧೦-೦೦ಘಂಟೆಗೆ ಸ್ವಾಗತ ಮಂಟಪಕ್ಕೆ ಹೂದೆವು ಅಲ್ಲಿ ಶ್ರೀ ಪೇಜಾವರ ಶ್ರೀಗಳವರು ಹಸ್ತಲಾಘವದಿಂದಾ ಮೂರು ಮಂದಿ ಶ್ರೀಗಳ ಸ್ವಾಗತ ಮಾಡಿದ ನಂತರ ಎಲ್ಲರೂ ಪಿಠಾರೋಹಣ ಮಾಡಿದರು. ಆಮೇಲೆ ಸ್ವಾಗತ ಭಾಷಣಗಳು ಮುಗಿದವು. ಎಲ್ಲರೂ ಶ್ರೀಪೇಜಾವರ ಶ್ರೀಗಳವರ ನಿರೂಪ ತೆಗೆದುಕೂಂಡು ತಮ್ಮ ತಮ್ಮಗೂಸ್ಕರ ಏರ್ಪಾಟು ಮಾಡಿದ ಸ್ಥಳಗಳಿಗೆ ಹೂಗಲಾಯಿತು. ತನ್ನ ಪೀಠದಿಂದಾ ೨೦೦ನೂರು ವರ್ಷಗಳ ಹಿಂದೆ ಕಣ್ವ ಪೀಠಕ್ಕೆ ಹೋದ ವಿಠ್ಠಲಕ್ರಿಷ್ಣನು ಒಳ್ಳೆ ವೈಭವದಿಂದಾ ಬಂದು ತನ್ನ ರಜತ ಪೀಠವನ್ನು ಅಲಂಕರಿಸಿ ತನ್ನ ಎಲ್ಲ ಭಕ್ತರನ್ನು ಪುನೀತರನ್ನಾಗಿ ಮಾಡಿದನು. ಇದು ಒಂದು ದೂಡ್ಡಸುಯೋಗವು. ಈ ಯೋಗಕ್ಕೆ ಸರ್ವೋತ್ತಮ ಯೋಗವೆಂದು ನಾಮ ರಹಸ್ಯದಿಂದಾ ಕರೆದೆವು. ನಮ್,ಅಗೆ ಕ್ರಿಷ್ಣದೇವರ ಒಳಬಾಗಿಲ ಮುಂದೆ ಮಹಡಿಯಮೇಲೆ ಇಳಿದುಕೋಳ್ಳಲು ಸ್ಥಾನ ಕಾಯ್ದಿರಿಸಾಲಾಗಿತ್ತು. ಮತ್ತು ಕನಕನ ಕಿಂಡಿಯ ಎಡಬಾಗದಲ್ಲಿ ದೇವತಾರ್ಚನೆ ವಗೈರೆ ಕಾರ್ಯಗಳಿಗೆ ಸ್ಥಳ ಮಾಡಲಾಗಿತ್ತು. ಆಪ್ರಕಾರ ಎಲ್ಲಾ ವ್ಯವಸ್ತೆ ಮಾಡಿಕೊಂಡು ರಾತ್ರಿ ಸ್ನಾನಾನ್ಹೇಕ ಮಂಗಳಾರತಿ ಫಲಹಾರ ವಗೈರೆ ಕಾರ್ಯಗಳನ್ನು ಮುಗಿಸಿ ವಿಶ್ರಾಂತಿಗೂಸ್ಕರ ಎಲ್ಲರೂ ನಿದ್ರಾವಶರಾದರು. ದಿ|| ೧೯-೦೧-೧೯೬೮ನೇ ದಿವಸ ಭೋಜನ ಆದ ನಂತರ ಎಲ್ಲರೂ ವಿಶ್ರಾಂತಿ ತೆಗೆದುಕೂಂಡು ಉಡುಪಿಯಲ್ಲಿಯ ಪ್ರೇಕ್ಷಣೀಯ ಸ್ಥಾನವನ್ನು ದ್ರಿಗ್ಗೋಚರ ಮಾಡಲು ಎಲ್ಲರೂ ಹೋದರು. ನಾವು ಮಾತ್ರ ಎಲ್ಲಕಡೆಯಿಂದಾ ಬಂದ ಶಿಷ್ಯರು ದರ್ಶನಕ್ಕೆ ಬರುವದು ಅವರ ಕ್ಷೇಮಸಮಾಚಾರದಲ್ಲಿಯೇ ಅವತ್ತಿನ ದಿವಸ ಕಳೆಯಿತು. ಮತ್ತೆ ಸಾಯಂಕಾಲ ಸ್ನಾನ ಆನ್ಹೇಕ ಮಂಗಳಾರತಿ ವಿಶ್ರಾಂತಿಯಲ್ಲಿ ಈದಿನ ಉರುಳಿ ಹೋಯಿತು ದಿ||೨೦-೦೬-೧೯೬೮ನೇ ದಿವಸ ಪ್ರಾತ:ಸ್ನಾನ ವಗೈರೆ ಮುಗಿದಮೆಲೆ ಎಲ್ಲಕಡೆಯಿಂದಾ ಬಂದ ಕಣ್ವ ಶಾಖೆಯ ಶಿಷ್ಯರು ತಮಗೆ ಮುದ್ರಾಧಾರಣ ಬೇಕೆಂಬ ಸೂಚನೆ ಮಾಡಲು ಪ್ರಾರಂಭ ಮಾಡಿದರು.
ಅಲ್ಲಿ ಮುದ್ರಾದವಿಷಯವೇ ಇಲ್ಲದ್ದರಿಂದಾ ಈಗ ಪರ್ಯಾಯದ ಪೀಠಸ್ಥರಾದ ಶ್ರೀ ಪೇಜಾವರ ಶ್ರೀಗಳನ್ನು ವಿಚಾರ ಮಾಡಬೆಕೆಂಬ ನಿರ್ಣಯವಾಯಿತು. ಸದರ ವಿಚಾರಕ್ಕೂಸ್ಕರವಾಗಿ ವೇ||ಶೀನಪ್ಪಯ್ಯ ದೇವರು ಮತ್ತು ಪರೀಕ್ಷಿತರಾಜ ವೇ||ಗೋಪಾಲಾಚರ್ಯ ಇವರನ್ನು ಶ್ರೀಪೇಜಾವರ ಶ್ರೀಗಳ ಸನ್ನಿಧಾನಕ್ಕೆ ಕಳಿಸಲಾಯಿತು. ಆಕಾಲಕ್ಕೆ ಅಲ್ಲಿ ವಿಚಾರ ಮಾಡಿದ ವಿಷಯ ಈಗ ಕಣ್ವ ಶಾಖೆಯ ದ್ವೈತಸಿದ್ದಾಂತಕ್ಕೆ ಹೂಂದಿಕೂಂಡ ಶಿಷ್ಯರು ತಮಗೆ ನಮ್ಮ ಮಠದ ಶ್ರೀಗಳಿಂದಾ ತಪ್ತಮುದ್ರಾ ಧಾರಣ ಆಗಬೇಕೆಂಬ ಆತುರದ ಸೂಚನೆಯನ್ನು ಮಾಡಹತ್ತಿದ್ದರೆ. ಮತ್ತು ಐವತ್ತು ವರ್ಷದಲಾಗಾಯ್ತ ನಮಗೆ ನಮ್ಮ ಶ್ರೀಗಳ ದರ್ಶನವೇಇಲ್ಲಾ ತಪ್ತಮುದ್ರಾ ಧಾರಣವಿಲ್ಲದೇ ನಾವು ಬಳಲುತ್ತಿದ್ದೆವೆ, ಈಗ ಆ ಯೋಗವನ್ನು ಶ್ರೀವಿಠಲಕ್ರಿಷ್ಣನು ನಮಗೆ ತಂದುಕೂಟ್ಟಿದ್ದಾನೆ. ಎನಾದರೂ ಮಾಡಿ ನಮಗೆ ಮುದ್ರಾಧಾರಣ ಆಗಲೇಬೆಕೆಂದು ಎಲ್ಲಾ ಶಿಷ್ಯರು ಆತುರಪಡಹತ್ತಿದ್ದರೆ. ಅದಕ್ಕೂಸ್ಕರ ಶ್ರೀಗಳು ನಿಮ್ಮ ಕಡೆಗೆ ನಮ್ಮನ್ನು ಕಳಿಸಿದ್ದಾರೆ. 

Last part to be continued...






 

No comments:

Post a Comment