Sunday, June 23, 2013

ರಜತ ಪಿಠಾದಿಪತಿಯ ದರುಶನಕ್ಕೆ ವಿಠಲ ಕೃಷ್ಣನ ಪ್ರಥಮ ಪ್ರಯಾಣ - part1


!! ವಿಠಲ ಕೃಷ್ಣೋ ವಿಜಯತೆ !!
ರಜತ ಪಿಠಾದಿಪತಿಯ ದರುಶನಕ್ಕೆ ವಿಠಲ ಕೃಷ್ಣನ ಪ್ರಥಮ ಪ್ರಯಾಣ.

( ಶ್ರೀ ಶ್ರೀ ಶ್ರೀ ೧೦೮ ವಿದ್ಯಾತಪೋನಿಧಿ ತೀರ್ಥರ ಆತ್ಮ ಚರಿತ್ರೆಯ ಆಯ್ದ ಭಾಗ )

ನಮಗೆ ಉಡುಪಿಗೆ ಹೊಗಲು ದಿನೆ ದಿನೆ ಆತುರ ಹೆಚ್ಚಾಗ ಹತ್ತಿತು ಆದರೆ ನಮಗೆ ಅನಾನುಕುಲತೆಗೆ ಏನೂ ಕೊರತೆ ಇಲ್ಲದ ಪರಿಸ್ತಿತಿ. ಅನಾನುಕುಲತೆ ಅಂದರೆ ವಿಜಾಪೂರ ಜಿಲ್ಲಾ ಬಾಗೆವಾಡಿ ತಾಲ್ಲೂಕ ಪೈಕಿ ಕೃಷ್ಣಾ ದಂಡೆಯಲ್ಲಿ ಇರುವ ಒಂದು ಸಣ್ಣ ಹಳ್ಳಿಯಾದ ಬಳೂತಿಯಲ್ಲಿ ಜೋಷಿಯವರ ಅಂದರೆ ಶ್ರೀ ಜೀವಣಭಟ್ಟ ಮತ್ತು ಅವರ ಕುಟುಂಬ ಚಂದಾಬಾಯಿಯವರ ಉದರದಲ್ಲಿ ಹುಟ್ಟಿ ಬೆಳೆದು ಇದುವರೆಗೂ ಅಲ್ಲೇ ಕಾಲಗಳು ಗತಿಸಿ ಹೂದವು. ಆದರೆ ಪೊರ್ವಾಶ್ರಮದಲ್ಲಿ ಯಾವಾಗಲೂ ಈ ಪ್ರಾಂತಕ್ಕೆ ಬಂದಿಲ್ಲಾ. ಇಲ್ಲಿ ಯಾರದು ಪರಿಚಯವಿಲ್ಲಾ ಇಂಥ ಸ್ತಿತಿಯಲ್ಲಿ ನಾವು ದೇವದುರ್ಗಕ್ಕೆ ಬಂದು ಆಶ್ರಮತೆಗೆದುಕೂಂಡದ್ದು ಇಲ್ಲಿ ಸಾಧಾರಣವಾಗಿ ದೇವರು ವೆಂಕಪ್ಪಯ್ಯನವರು, ದೇವರು ವಕೀಲರು, ಪರೀಕ್ಷಿತರಾವ ವಕೀಲ, ರಾಜಪ್ಪಾ ಕಳಮಳ್ಳಿ, ಮತ್ತು ತೇಜಪ್ಪಾ ವೆಂಕಟಾಪೊರ ಇವರದು ಸಾಧಾರಣ ಪರಿಚಯ ಉಳಿದ ಯಾರದೂ ಪರಿಚವೇ ಇಲ್ಲಾ. ಆಶ್ರಮ ತೆಗೆದುಕೂಂಡು ಆರು(೬) ತಿಂಗಳ ಮಠದ ಆಸ್ತಿ ಬಗ್ಗೆ ಯಾವದು ಪರಿಚಯವಿಲ್ಲಾ. ಪ್ರತಿನಿತ್ಯ ನಮ್ಮ ಆತಿಥ್ಯ ಮಾತ್ರ ಯಾವಕೊರತೆ ಇಲ್ಲದೆ ವೆಂಕಪ್ಪಯ್ಯಾ ದೆವರು ಇವರ ಮನೆಯಲ್ಲಿ ನಡೆದು ಇದ್ದುದು ಇದು ದೂಡ್ಡ ಅನಕೂಲತೆ. ರೋಕ್ಕಕ್ಕೆ ನಮಗೆ ದರ್ಶನವೇ ಇಲ್ಲದಿರಲು ಆರ್ಥಿಕ ಪರಿಸ್ತಿತಿಯ ಬಗ್ಗೆ ಬರೆಯುವ ಕಾರಣವಿಲ್ಲಾ ಉಡುಪಿಗೆ ಹೊಗಲು ಆತುರತೆಯಷ್ಟು ಈ ಎಲ್ಲ ಕಾರಣ ಮೂಲಕವಾಗಿ ನಿರಾಶಯು ಬೆನ್ನ ಹತ್ತಿತು ಈ ಸ್ತಿತಿಯಲ್ಲಿ ಬಹಳೇ ಗೊಂದಲದಲ್ಲಿ ಬಿದ್ದುಬಿಟ್ಟೆವು. ಮುಂದೆ ವಿಚಾರ ತೊರದಂತಾಗಿ ಉದಾಸೀನರಾಗಬೆಕಾಯಿತು ಆದರೂ ಉದಾಸೀನದಲ್ಲಿ ಮನಸ್ಸು ಸ್ತಿರವಾಗಿಲಿಲ್ಲ. ನೀನು ಪ್ರಯತ್ನ ಮಾಡು ಅಂತಾ ಮನಸ್ಸಿಗೆ ವಿಠ್ಥಲ ಕೃಷ್ಣನ ಪ್ರೇರಣೆ ಆಗ ಹತ್ತಿತು, ಆದರೆ ಮೇಲೆ ಮೇಲೆ ಎಲ್ಲಕಡೆಯ ಶಿಷ್ಯರು ಬರತೊಡಗಿದರು, ಬಂದ ಎಲ್ಲ ಶಿಷ್ಯರಿಗೂ ನಾವು ಉಡುಪಿಗೆ ಹೋಗುವ ಸಮಾಚಾರದ ಪ್ರಸ್ತಾಪ ಮಾಡಲು ಪ್ರಾರಂಭ ಮಾಡಿದೆವು. ಏನೂ ಅಡ್ಡಿ ಇಲ್ಲಾ ಅನಕೂಲಮಾಡಿಕೂಂಡು ಹೊಗೇಬಿಡಬೆಕು ಎಂಬ ಹರ್ಷೋದ್ಗಾರಗಳು ಎಲ್ಲ ಶಿಷ್ಯರಿಂದಲೂ ಹೂರಬಿಳಹತ್ತಿದವು. ಆದರೂ ಕಾರ್ಯರೂಪಕ್ಕೆ ಬರುವದು ಕಠೀಣ ಅನಿಸುತಿತ್ತು. ಆದರೆ ಯಾವದೋ ಒಂದು ಕಾರ್ಯನಿಮಿತ್ತವಾಗಿ ಶೀನಪ್ಪಯ್ಯ ದೇವರು, ವಕೀಲ ಪರೀಕ್ಷಿತರಾಜ, ಭಿಮಾಚರ್ಯ ಡಾಕ್ಟರ, ಶ್ರೀ ರಾಮರಾವ ಸಿದ್ದಪೂರ, ಶ್ರೀಕೃಷ್ಟರಾವ ಸಿದ್ದಪೂರ, ವೇ|| ಗೋಪಾಲಾಚಾರ್ಯ ಕನಕಗಿರಿ, ನಾರಾಯಣರಾವ ವೆಂಕಟಾಪುರ, ರಾಜಪ್ಪ ಕಳಮಳ್ಳಿ, ವೇ|| ಅಚ್ಚಪ್ಪಯ್ಯಾ ದೇವರು ಡಾಕ್ಟರು, ಶ್ರೀ ಭೀಮರಾವ ದೆಸಾಯಿ ಮಲದಕಲ್ಲು, ಶ್ರೀ ರಾಮೇಶ್ವರಾವ ದೇಸಾಯಿ ಮಲದಕಲ್ಲು, ಸ್ತಳೀಕರು, ವೆ|| ವೆಂಕಪ್ಪಯ್ಯಾ ದೇವರು, ಶ್ರೀ ಅನಂತರಾಮರಾವ ವಗೈರೆ ದೇವದುರ್ಗದ ಶಿಷ್ಯ ಮಂಡಳಿ, ಏಲ್ಲರೂ ಕೂಡಿದ ವೇಳೆಯಲ್ಲಿ ಪರಮಾತ್ಮನ ಪ್ರೇರಣೆ ಮೇರೆಗೆ ಉಡುಪಿಗೆ ಹೋಗಬೆಕೆಂಬ ವಿಚಾರ ಏಲ್ಲಾಜನರಿಗೂ ತಿಳಿಸಲಾಯಿತು. ಏಲ್ಲರವಿಚಾರ ಪ್ರಾರಂಭವಾಗಿ ರೂಕ್ಕದ ಅನಕೂಲದ ಬಗ್ಗೆ ಶ್ರೀ ಮಾಧವತೀರ್ಥರ ಆಶ್ರಮವಾದಮೇಲೆ ಯಾರೂ ಹೂಗಿರುವದಿಲ್ಲಾ. ಅಲ್ಲಿಯ ಸ್ಥಿತಿಏನಾಗುವದೋ ಎಂಬ ಭುಗಿಲು ಇವುಗಳ ವಿಚಾರ ನಡೆದು ಎಷ್ಟೇ ಆತಂಕಗಳು ಬಂದರೂ ಧೈರ್ಯದಿಂದಾ ಎದುರಿಸಿ ಉಡುಪಿಗೆ ಹೋಗಿಯೇಬಿಡಬೆಕೆಂಬ ನಿಶ್ಚಯವಾಯಿತು. ಮತ್ತು ವಿಠಲಕೃಷ್ಣನು ಎಲ್ಲಶಿಷ್ಯರಿಗೆ ನಿವು ಶ್ರೀಗಳು ಸಹಿತಾ ಉಡುಪಿಗೆ ಬರಬೆಕೆಂದು ಎಲ್ಲಶಿಷ್ಯರ ಕಿವಿ ಯಲ್ಲಿ ಊದಿಬಿಟ್ಟನು. ಅದರಿಂದಾ ಎಲ್ಲಕಡೆಗೂ ಉಡುಪಿಗೆ ಹೋಗುವ ವಿಚಾರವೇ ವಿಚಾರ. ಹಿಗಾಗಿ ಎಲ್ಲರಿಗೂ ಉಡುಪಿಗೆ ಹೋಗಬೆಕೆಂಬ ಆತುರತೆಯು ಹೆಚ್ಚಾಗಿಬಿಟ್ಟಿತು. ಆದರೆ ಮತ್ತೇ ಒಂದು ಸಂಕೋಚವು ತಲೆದೂರಹತ್ತಿತು. ನಮ್ಮ ಪೀಠದಶ್ರೀಗಳನ್ನು ಕರೆದುಕೊಂಡುಹೊಗಬೆಕಾದರೆ ಉಡಪಿ ಪಿಠದವರಿಂದಾ ಆಮಂತ್ರಣವಿಲ್ಲದೆ ಹಾಗೆ ಹೊಗುವದು ಹೇಗೆ? ಎಂಬ ವಿಚಾರವು ಬಲವತ್ತಾಗಿ ಎದುರಿಗೆ ಬಂದು ನಿಂತಿತು.


ಮುಂದೆ ದೆವರ ಕೃಪೆಯಿಂದಾ ಅದರ ಪರಿಹಾರವಾಯಿತು. ಶ್ರೀಶ್ರೀಶ್ರೀ ವಿಶ್ವೇಶತೀರ್ಥ ಪೆಜಾವರ ಉಡುಪಿ ಮಠ ಶ್ರೀ ಪಾದಂಗಳವರು ಪರ್ಯಾಯದ ಸಂಚಾರ ನಿಮಿತ್ಯವಾಗಿ ರಾಯಚೂರಿಗೆ ಬಂದಾಗ್ಗೆ ವೇ|| ಶೀನಪ್ಪಯ್ಯದೇವರು ವಕೀಲರ ಮನೆಯಲ್ಲಿ ಸಂಜಾತ ಭಿಕ್ಷಾದ ದಿವಸ ಮನೆಯಲ್ಲಿ ಕೊತ ವೇಳೆಯಲ್ಲಿ ಅಕಸ್ಮಾತ ಕಣ್ವ ಮಠದ ಬಗ್ಗೆ ವಿಚಾರ ನಡೆದು ದೇವರು ವಕೀಲರಿಂದಾ ಎಲ್ಲ ಸಮಾಚರ ತಿಳಿದುಕೊಂಡು ಈ ವರ್ಷ ನಾನು ಪರ್ಯಾಯ ಪಿಠಾರೋಹಣ ಮಾಡಿದಮೇಲೆ ನೀವು ಕಣ್ವಮಠದ ಶ್ರೀಗಳನ್ನು ಕರೆದುಕೊಂಡು ಬರಲೇಬೇಕು ಎಂದು ಆಮಂತ್ರಣ ಕೊಟ್ಟು ನಾನು ಉಡುಪಿಗೆ ಹೋದಮೇಲೆ ಕರೆದುಕೊಂಡು ಬರತಕ್ಕ ದಿವಸ ಮತ್ತು ವೇಳೆ ಎಲ್ಲವನ್ನು ಟಪಾಲುದ್ವಾರಾ ತಿಳಿಸಲಾಗುವದೆಂದು ಹೇಳಿಹೊದರು. ದಿನಾಂಕ, ದಿವಸ, ಆಮಂತ್ರಣ ಪತ್ರದಲ್ಲಿ ಎಲ್ಲವನ್ನು ತಿಳಿಸಿ ನಿಮ್ಮ ಮಠದ ಗೌರವಕ್ಕೆ ಏನೂ ನ್ಯೂನ್ಯತೆ ಬಾರದಂತೆ ನೋಡಿಕೊಳ್ಳುವೆವು ಎಂದು ಒಳ್ಳೆ ಆಗ್ರಹದ ಆಮಂತ್ರಣ ಪತ್ರ ಕಳಿಸಿದರು ಮತ್ತು ಮುಂದೆ ತಮ್ಮ ಸಂಚಾರದಲ್ಲಿ ಕಣ್ವಮಠದ ಶ್ರೀಗಳವರು ಉಡುಪಿಗೆ ಬರುತ್ತಾರೆ ಅಂತಾ ಎಲ್ಲಕಡೆಯಲ್ಲಿ ಪ್ರಚಾರ ಮಾಡಿದರು. ಅದರಿಂದಾ ಎಲ್ಲಕಡೆಗೆ ಆನಂದವೇ ಆನಂದ. ಪಿಠ ಸ್ತಾಪಿತರಾದ ಶ್ರೀ ಮನ ಮಾಧವತೀರ್ಥರು ಆಶ್ರಮ ತೆಗೆದುಕೂಂಡು ಬಂದ ಮೇಲೆ ಯಾರೂ ಹೋಗಿಲ್ಲಾ ಈಗ ಯೋಗಪ್ರಾಪ್ತವಾದದ್ದು ಬಹಳೇ ಸುಯೊಗ. ಎಲ್ಲಶಿಷ್ಯರಲ್ಲಿಯೂ ಉಡುಪಿಗೆ ಹೋಗೆತೀರಬೆಕೆಂಬ ಆತುರತೆಯು ಉತ್ಪನ್ನವಾಗಿ ತಾವು ಉಡುಪಿಗೆ ಬರುವ ನಿರ್ದಾರವನ್ನು ನಮ್ಮ ದರ್ಶನದದ್ವಾರಾ ತಿಳಿಸಿ ಹೂಗಹತ್ತಿದರು. ಎಲ್ಲ ಕಡೆಗೂ ಉಡುಪಿಗೆ ಹೋಗುವ ಗೂಂದಲವೇ, ಗೂಂದಲ ನಡೆಯಿತು. ಮುಂದೆ ಶೀನಪ್ಪಯ್ಯನವರು ತಮ್ಮ ಸಹಕಾರಿಗಳೂಂದಿಗೆ ಬಂದು ಶ್ರೀ ಪೇಜಾವರ ಶ್ರೀಗಳವರ ಕಡೆಯಿಂದಾ ಆಮಂತ್ರಣ ತೋರಿಸಿ ಉಡುಪಿಗೆ ಹೋಗುವ ಮಿತಿಯನ್ನು ನಿಶ್ಚ್ಯಯಿಸಿಕೂಂಡು ಹೂದರು.ಮುಂದೆ ಸ್ವಲ್ಪು ದಿವಸದಲ್ಲಿ ಶ್ರೀ ವಿದ್ಯಮಾನ್ಯ ತೀರ್ಥ ಭಂಡಾರ್ಕೇರಿ ಶ್ರೀಗಳವರು ರಾಯಚೂರಿಗೆ ಆಗಮಿಸಿದ್ದಾಗ್ಗೆ ವೆ|| ಶೀನಪ್ಪಯ್ಯ ದೇವರು ಇವರಿಂದಾ ಕಣ್ವಮಠದ ಶ್ರೀಗಳು ಉಡುಪಿಗೆ ಹೋಗುವ ನಿಶ್ಚ್ಯಯ ತಿಳಿದುಕೂಂಡರು ಮತ್ತು ಶ್ರೀ ಪೇಜಾವರ ಶ್ರೀಗಳಿಂದಾ ಬಂದ ಆಮಂತ್ರಣ ಪತ್ರದ ಅವಲೂಕನ ಮಾಡಲಾಗಿ ಅದರಲ್ಲಿ ಬರೆದ ವಿಷಯ ನಾವು(ಪೆಜಾವರಶ್ರೀಗಳವರು) ದಿ||೧೮-೧೦-೧೯೬೯ ಮುಂಜಾನೆ ಪರ್ಯಾಯದ ಪತ್ತವೇರುತ್ತೆವೆ, ಆಮೇಲೆ ಪೂರ್ಣ ಅಧಿಕಾರ ನಮಗೆ ಪ್ರಾಪ್ತವಾಗುತ್ತದೆ. ಅದೇ ದಿವಸ ಸಾಯಂಕಾಲಕ್ಕೆ ನೀವು ಉಡುಪಿಗೆ ಆಗಮಿಸಬೇಕು ಅಂದರೆ ನಿಮ್ಮ ಗೋಸ್ಕರ ಎಲ್ಲ ಕಾರ್ಯಗಳು ಮಾಡಲು ನಾವು ಸ್ವತಂತ್ರರಾಗುತ್ತೇವೆ. ಅದರಒಳಗಡೆ ನಿಮ್ಮ ಆಗಮನವಾದಲ್ಲಿ ನಮಗೆ ಕಾರ್ಯಮಾಡಲು ಪೊರ್ಣಸ್ವತಂತ್ರ ಇರುವದಿಲ್ಲಾ. ಅದಕ್ಕೊಸ್ಕರವಾಗಿ ನೀವು ನಿಮ್ಮ ಶಿಷ್ಯಮಂಡಳಿ ಸಹಿತ ಆಗಮಿಸಿ ಕ್ಷೇತ್ರ ಪ್ರವೇಶ ಮಾಡಬೇಕು ಅಂತಾ ಕಳಿಸಿದ ಆಮಂತ್ರಣ ಪತ್ರವನ್ನು ನೀರೀಕ್ಷಿಸಿ ಸದರ ಶ್ರೀ ಭಂಡಾರಕೇರಿ ಶ್ರೀಗಳವರು ನೀವು(ಶೀನಪ್ಪಯ್ಯಗೆ) ಶ್ರೀಕಣ್ವಮಠದ ಶ್ರೀಗಳನ್ನು ಕರೆದುಕೂಂಡು ದಿ||೧೮-೦೧-೧೯೬೯ನೇ ದಿವಸ ಮುಂಜಾನೆ ಭಂಡಾರಕೇರಿಗೆ ಬರಬೇಕು ಅಲ್ಲಿ ಪೂಜಾ, ತೀರ್ಥ, ಪ್ರಸಾದ ತೀರಿಸಿಕೂಂಡು ನಾವು ನೀವು ಸಂಘಟಿತರಾಗಿ ಉಡುಪಿಗೆ ಹೋಗೋಣ ಎಂಬ ತಮ್ಮ ಅಭಿಪ್ರಾಯದ ಆಮಂತ್ರಣಕೂಟ್ಟು ನಮಗೆ ಆಮಂತ್ರಣ ಪತ್ರ ಕಳಿಸಿಕೂಟ್ಟು ಶ್ರೀಗಳವರು ಭಂಡಾರಕೇರಿಗೆ ಹೋದರು. ಇವು ಇಲ್ಲಿ ವಿಚಾರಗೋಷ್ಟಿ ನಡೆದಕಾಲಕ್ಕೆ ನಾವು ದೇವದುರ್ಗದಲ್ಲಿ ವೆ||ವೆಂಕಪ್ಪಯ್ಯಾದೇವರಮನೆಯಲ್ಲಿಯೇ ಇದ್ಯವು. ನಮಗೆ ಎಲ್ಲಾ ವಿಚಾರದಲ್ಲಿಯೂ, ಮತ್ತು ಕಾರ್ಯದಲ್ಲಿಯೂ ಒಳ್ಳೇ ಸಹಕಾರಿಯಾಗಿದ್ದರು. ನಿರಾಧಾರ,ನಿರಾಶೆ ಇದ್ದ ವೇಳೆಯಲ್ಲಿ ಉಡುಪಿಗೆ ಹೂಗಬೆಕೆಂಬ ಪ್ರೇರಣೆ ಮಾಡಿ ನಾಟಕ ಪ್ರಾರಂಭ ಮಾಡಿದ ಶ್ರೀಹರಿಯು ಈ ಷ್ಟೇಜಿಗೆ ತಂದ ಶ್ರೀ ಹರಿಯು ತನ್ನ ಸಂಕಲ್ಪದ ಪ್ರಕಾರ ಉಡುಪಿಗೆ ಹೋಗುವದನ್ನು ನಿಶ್ಚಿತಮಾಡೇಬಿಟ್ಟನು..


 

1 comment:

  1. ಶ್ರೀ ಶ್ರೀ ಶ್ರೀ ೧೦೮ ವಿದ್ಯಾತಪೋನಿಧಿ ತೀರ್ಥರ ಆತ್ಮ ಚರಿತ್ರೆಯnnu share madiddakkagi Dhanyavadagalu!!

    Namma Yatigala bagge hagu hindina itihasada bagge namage gottirabeku. Namma hindina itihasave labhayvilla annuavantaha kalamana idu. Happy to read these pages from his autobiography.

    Thank you!
    Santosh Kulkarni

    ReplyDelete