ಭೀಷ್ಮ ಪಂಚಕ ವ್ರತ
ಭೀಷ್ಮ ಪಂಚಕ ವ್ರತವು ಪರಮ ಪವಿತ್ರವೂ,ಸಮಸ್ತ ಪಾಪ ನಾಶಕವೂ ಆದ ವ್ರತವಾಗಿದೆ. ಯಾವ ಮಾನವನು ಭಕ್ತಿ ಪೂರ್ವಕವಾಗಿ ಈ ವ್ರತವನ್ನು ಅನುಷ್ಠಾನ ಮಾಡುವನೊ ಅವನಿಗೆ ಅಚ್ಯುತನು ಮುಕ್ತಿ ಪ್ರಧಾನ ಮಾಡುತ್ತಾನೆ. ಭ್ರಹ್ಮಚಾರಿ, ಗ್ರಹಸ್ಥ, ವಾನಪ್ರಸ್ಥ ಅಥವಾ ಸನ್ಯಾಸಿ ಯಾವನಾದರೂ ಈ ವ್ರತವನ್ನು ಮಾಡಿದರೆ ಅವನಿಗೆ ಪರಮ ದುರ್ಲಭವಾದ ವೈಷ್ಣವ ಸ್ಥಾನವು ಪ್ರಾಪ್ತವಾಗುತ್ತದೆ. ಈ ವ್ರತವನ್ನು ಕಾರ್ತಿಕ ಶುಕ್ಲ ಏಕಾದಶಿಯಿಂದಾ ಪ್ರಾರಂಭಿಸಿ ಹುಣ್ಣಿಮೆಯದಿನ ಪೂರ್ತಿಗೊಳಿಸಬೆಕು. ಯಾವನು ಈ ವ್ರತವನ್ನು ಮಾಡುವನೊ ಅವನು ಬ್ರಹ್ಮಹತ್ಯಾ, ಗೊಹತ್ಯಾ, ಪಾಪಗಳಿಂದಾ ಮುಕ್ತನಾಗಿ ಶುದ್ದವಾದ ಸದ್ಗತಿಯನ್ನು ಹೂಂದುತ್ತಾನೆ. ಎಂದು ಭೀಷ್ಮಾಚಾರ್ಯರ ವಚನವಿದೆ.
ಮೂದಲು ಕೃತಯುಗದಲ್ಲಿ ವಶಿಷ್ಠ, ಭ್ರುಗು,
ಶುಕ್ರ, ಗರ್ಗ, ಪ್ರಹ್ಲಾದ, ಮೂದಲಾದ ಮುನಿಗಳೂ, ಆನಂತರ ತ್ರೆತಾಯುಗದಲ್ಲಿ ನಾಭಾಗ, ಅಂಬರಿಷ
ಇನ್ನುಳಿದವರು, ದ್ವಾಪಾರದಲ್ಲಿ ಶಿರಭದ್ರ ಮೂದಲಾದ ವೈಶ್ಯರು ಮತ್ತು ಕಲಿಯುಗದಲ್ಲಿ ಉತ್ತಮ
ಅಚಾರವುಳ್ಳ ಶೂದ್ರರು ಕೂಡಾ ಈ ವ್ರತವನ್ನು ಅನುಷ್ಠಾನ ಮಾಡಿದ್ದಾರೆ.
ವ್ರತಾಚರಣೆ -
ಭೀಷ್ಮ ಪಂಚಕವೆಂಬ ಹೆಸರಿನ ಈ ವ್ರತವು
ವಿಷ್ಣುವಿಗೆ ಹೆಚ್ಚು ಸಂತೂಷವನ್ನುಂಟು ಮಾಡುವಂಥಾದ್ದು ಮತ್ತು ರಹಶ್ಯಮಯವೂ, ಆಗಿದೆ. ಕಾರ್ತಿಕ
ಮಾಸದ ಶುಕ್ಲ ಪಕ್ಷದ ಏಕಾದಶಿಯಿಂದಾ ಮನೊಹರವಾದ ಪೌರ್ಣೀಮೆಯವರೆಗಿನ (೫)ಐದು ತಿಥಿಗಳು ಪಂಚಭೀಷ್ಮ
ವೆಂದು ಪ್ರಸಿದ್ದವಾಗಿದೆ. ಈ ತಿಥಿಗಳು ಬಹು ಪುಣ್ಯದಾಯಕವಾಗಿವೆ. ಈ ದಿನಗಳಂದು
ಪ್ರಾತ:ಕಾಲದಲ್ಲೆದ್ದು ವಿಧಿಪೂರ್ವಕ ಶೌಚಾದಿಗಳನ್ನು ಮುಗಿಸಿ ವ್ರತವನ್ನು ಮಾಡುವವರು ಶುದ್ದವಾದ
ಜಲವುಳ್ಳ ನದಿ, ದೆವಖಾತ, ಅಥವಾ ಪವಿತ್ರ ಜಲಾಶಯಗಳಲ್ಲಿ ಶರೀರಕ್ಕೆ ಗೊಮಯವನ್ನು ಹಚ್ಚಿಕೊಂಡು ತಮ್ಮ
ಧರ್ಮಪತ್ನಿಯೊಂದಿಗೆ (ಹೆಂಡತಿಯೂ ವ್ರತ ಮಡುತ್ತಿದ್ದಲ್ಲಿ) ಸ್ನಾನ ಮಾಡಬೆಕು. ನಂತರ ಮಡಿ
ಬಟ್ಟೆಯನ್ನುಟ್ಟುಕೊಂಡು ದೇವತಾ ನಿರ್ಮಾಲ್ಯ ವಿಸರ್ಜನ, ಸಂಧ್ಯಾವಂದನ, ಬ್ರಹ್ಮಯಜ್ನಾದಿಗಳನ್ನು
ಮುಗಿಸಿ ಕುರುವಂಶ ಪಿತಾಮಹನಾದ ಭೀಷ್ಮಾಚಾರ್ಯರನ್ನು ಕುರಿತು ||
ವೈಯ್ಯಾಘ್ರಪಾದಗೋತ್ರಾಯ ಸಾಂಕೃತಿ ಪ್ರವರಾಯ ಚ |
ತಿಲತೋಯಾಂಜಲಿಂ ತಸ್ಮೈ ಪ್ರದದಾಮಿ ಮಹಾತ್ಮನೇ ||೧|
ಎಂದು ಭಿಷ್ಮರಿಗೆ ತರ್ಪಣವನ್ನು ಕೊಟ್ಟು.
ಆಚಮನವನ್ನು ಮಾಡಬೆಕು. ನಂತರ ಗಂಧ,ಅಕ್ಷತೆ, ಪುಷ್ಪ, ಧೂಪ, ದೀಪ, ನೇವೈಧ್ಯಾದಿಗಳಿಂದ
ದೆವತಾರ್ಚನೆಯನ್ನು ಮಾಡಬೆಕು. ನಂತರ ಯತಾತ್ಮನಾದ ವ್ರತಧಾರಿಯು
ಸತ್ಯವ್ರತಾಯ ಶುಚಯೇ ಗಾಂಗೇಯಾಯ ಮಹಾತ್ಮನೇ|
ಭೀಷ್ಮಾಯ ತದ್ದದಾಮ್ಯರ್ಘ್ಯಂ ಆಜನ್ಮ
ಬ್ರಹ್ಮಚಾರಿಣೇ||೨||
ವ್ರತದ ಪೂರ್ಣಫಲಪ್ರಾಪ್ತಿಗಾಗಿ
ಕರುಸಹಿತವಾದ ಆಕಳನ್ನು ಶ್ರೋತ್ರಿಯನಾದ, ಕುಟುಂಬಿಯಾದ ಬ್ರಾಹ್ಮಣನಿಗೆ ದಾನವಾಗಿ ಕೊಡಬೆಕು. ಮತ್ತು
ಯಾವನು ಪತ್ನಿಸಮೇತನಾಗಿ ಪುತ್ರಕಾಮನೆಯಿಂದಾ ಭೀಷ್ಮಪಂಚಕ ವ್ರತವನ್ನು ಮಾಡಿ ಪೌರ್ಣಿಮೆಯದಿನ
"ಪಾಪಪುರುಷ" ಪ್ರತಿಮೆಯನ್ನು ದಾನವಾಗಿಕೊಡುವರೂ ಅವರು ವರುಷದಲ್ಲಿ ಪುತ್ರನನ್ನು
ಪಡೆಯುವರು. ಈ ಐದೂ ದಿನಗಳಲ್ಲಿ ಭಾಗವತಾದಿ ಪುರಾಣ ಶ್ರವಣ ಮಾಡಬೆಕು. ಹಾಗು ಕೊನೆಯದಿನದಂದು
ಆಚರ್ಯರಿಗೆ ಯಥಾಶಕ್ಥಿ ವಸ್ತ್ರಾಲಂಕಾರ ಸಹಿತವಾಗಿ ದಕ್ಶಿಣೆ ಗಳನ್ನು ಕೊಡಬೆಕು.
-
Shri Gururajacharya Punyavanta,
Hubli
No comments:
Post a Comment