Saturday, December 15, 2012

ಧನುರ್ಮಾಸ - Part 2/2

||ಶ್ರೀ ಕೇಶವ ಪ್ರಸನ್ನ ||
 
 * ಧನುರ್ಮಾಸ *
 
ಶ್ರೀ ನಂದನನಾಮ ಸಂ ದಕ್ಷಿಣಾಯಣ ಮಾರ್ಗಶಿರ ಶುಕ್ಲ ತ್ರತಿಯಾ ರವಿವಾರ ತಾ 16-12-2012 ರಿಂದಾ ಪುಷ್ಯಶುಕ್ಲ ದ್ವಿತಿಯಾ ರವಿವಾರ 13-01-2013ರ ವರೆಗೆ ಧನುರ್ಮಾಸವು ಇರುತ್ತದೆ. ಮಾರ್ಗಶಿರಮಾಸದಲ್ಲಿ ಸೂರ್ಯನು ಧನು ರಾಶಿಗೆ ಪ್ರವೇಶಿಸುವನು. ಅದಕ್ಕೆ ಈ ಮಾಸಕ್ಕೆ ಧನುರ್ಮಾಸ ಎಂದುಹೆಸರು.

ಒಂದು ವರುಷಲ್ಲಿ ಎರಡು ಆಯನಗಳು ದಕ್ಷಿಣಾಯಣ, ಉತ್ತರಾಯಣ ಎಂದು. ದಕ್ಷಿಣಾಯಣವು ಆಷಾಢದಿಂದಾ ಮಾರ್ಗಶಿರ್ಷದವರಗೆ, ಹಾಗುಪುಷ್ಯದಿಂದಾ ಜೇಷ್ಠದವರಗೆ ಉತ್ತರಾಯಣ ಎಂದು. ದಕ್ಷಿಣಾಯಣವು ದೆವತೆಗಳಿಗೆ ರಾತ್ರಿಯಾಗಿದೆ, ಉತ್ತರಾಯಣವು ಹಗಲು ಕಾಲವಗಿದೆ. ದಕ್ಷಿಣಾಯಣದ (6)ಆರು ತಿಂಗಳಲ್ಲಿ ಎರಡೆರಡು ತಿಂಗಳಿಗೊಂದು ಯಾಮದಂತೆ (3)ಮೂರು ಯಾಮಗಳು. ಮೊದಲಿನ ಏರಡು ಯಾಮಗಳು ಚಾತುರ್ಮಾಸ್ಯ ಕಾಲವೆಂದು ಪ್ರಸಿದ್ದವಾಗಿವೆ. ಕಾರ್ತಿಕ ಮಾಸ ಶುದ್ಧ ದ್ವಾದಸಿಯಂದು ಭಗವಂತನು ಏಳುವನು. ಮಾರ್ಗಶಿರ ಮಾಸವು ಮೊರನೆಯಾಮದ ಕೊನೆಯ ಪ್ರಹರವಾಗಿದೆ. ಉತ್ಥಾನ ದ್ವಾದಶಿಯಂದು ಎದ್ದ ಭಗವಂತನಿಗೆ ಧನುರ್ಮಾಸವು ಅರುಣೊದಯ ಕಾಲವಾಗಿದೆ.

ಈ ಕಾಲದಲ್ಲಿ ದೇವತೆಗಳು ಭಗವಂತನಿಗೆಹುಗ್ಗಿಯನ್ನು ನಿವೆದಿಶಿದರು. ಪ್ರತಿಯೊಬ್ಬನೂ ಧನುರ್ಮಾಸ ಒಂದು ತಿಂಗಳುಕಾಲ ಸೂರ್ಯೊದಯಕ್ಕೆ (96)ತೊಂಬತ್ತಾರು ನಿಮಿಷ (ಸುಮಾರು 4.30ಕ್ಕೆ)ಮೊದಲು ಎದ್ದು ದೇವರ ಪೂಜೆಮಾಡಿ ಮುದ್ಗಾನ್ನ, ಪಾಯಸಾದಿಭಕ್ಷ್ಯಗಳನ್ನುನೆವೇದ್ಯ ಮಾಡಬೆಕು. ನಂತರದಲ್ಲಿ ಸಂಧ್ಯಾವಂದನೆ,ನಿತ್ಯಾನ್ಹಿಕ ಗಳನ್ನು ಮಾಡಬೆಕು. ಸೂರ್ಯೊದಯವಾದಮೇಲೆ ಬ್ರಾಹ್ಮಣರ ಭೋಜನಮಾಡಿಸಿದನಂತರ ತಾನೊ ಭುಂಜಿಸಬೆಕು.

ಹುಗ್ಗಿಯಲ್ಲಿರಬೆಕಾದವಸ್ತುಗಳೆಂದರೆ ಅಕ್ಕಿ,ಹೆಸರುಬೆಳೇ,ಬೆಲ್ಲಾ,ಶುಂಠಿ,ಏಲಕ್ಕಿ,ತುಪ್ಪಾ,ಮೊಸರು. ಅಕ್ಕಿಯಪ್ರಮಾಣದಷ್ಠೆ ಹೆಸರು ಬೆಳೆಯನ್ನು ಹಾಕಿ ತಯ್ಯಾರಿಸಿದ ಮುದ್ಗಾನ್ನವು ಉತ್ತಮವಾದದ್ದು. ಅಕ್ಕಿಯ ಪ್ರಮಾಣದ ಅರ್ದದಷ್ಟು ಬೆಳೆ ಹಾಕಿ ಮಾಡಿದ ಹುಗ್ಗಿಯು,ಮಧ್ಯಮವಾದದ್ದು. ಅಕ್ಕಿಯ ಪ್ರಮಾಣದ ಕಾಲುಭಾಗ ಹೆಸರುಬೇಳೆಯನ್ನು ಉಪಯೊಗಿಸಿತಯ್ಯರಿಸಿದ ಹುಗ್ಗಿಯು ಅಧಮ ಎನಿಸುವದು. ಇನ್ನು ಅಕ್ಕಿಯಪ್ರಮಾಣಕ್ಕೆ ಎರಡುಪಟ್ಟು ಹೆಸರು ಬೆಳೆಯನ್ನು ಸೆರಿಸಿ ಮಾಡಿದ ಹುಗ್ಗಿಯು ಅತ್ಯಂತ ಶ್ರೆಷ್ಠವಾಗಿರುತ್ತದೆ.

 - 2 -
ನಾನು ದರಿದ್ರನೆಂದುಮುದ್ಗಾನ್ನವನ್ನು ಭಗವಂತನಿಗೆ ಅರ್ಪಿಸದೆ ಇರಬಾರದು. ನಿವೇದಿಸದ ವ್ಯಕ್ತಿಯು ಏಳು ಜನ್ಮದಲ್ಲಿ ದರಿದ್ರನಾಗುವನು.

!ಶಚೀ ದೇವಿಯ ಧನುರ್ಮಾಸ ಪೂಜೆ!

 ಇಂದ್ರದೇವರಪತ್ನಿಯಾದ ಇಂದ್ರಾಣೀದೇವಿಯು ತನ್ನ ಪತಿಯಾದ ಇಂದ್ರದೇವರು ಇಂದ್ರ ಪದವಿಯನ್ನು ಕಳೆದುಕೊಂಡು ಪದಚ್ಯುತರಾದಾಗ, ಧು:ಖಗೊಂಡ ಶಚೀದೇವಿಯು ಧನುಮರ್ಾಸದ ಅರುಣೋದಯದಲ್ಲಿ ಶ್ರೀಹರಿಗೆ ಮುದ್ಗಾನ್ನವನ್ನು ಸಮರ್ಪಿಸಿತನ್ನಪತಿಯಪದವಿಯನ್ನೂ, ನಿತ್ಯೈಶ್ವರ್ಯವನ್ನೂ ಸಹ ಪಡೆದಳು. ಲಕ್ಷ್ಮೀ ಪ್ರಾಪ್ತಿಗಾಗಿಲಕ್ಷ್ಮೀ ಪೊಜೆ - ಧನುರ್ಮಾಸದಲ್ಲಿ ಶ್ರೀ ಹರಿಗೆ ಮುಧ್ಗಾನ್ನವನ್ನು ಸಮರ್ಪಿಸಿನಂತರಲಕ್ಷ್ಮೀದೇವಿಯನ್ನು ದ್ವಾದಶನಾಮಗಳಿಂದಾ ಹನ್ನೆರಡು ಬಾರಿ ಕುಂಕುಮ,ಅರಿಷಿಣ,ಪುಷ್ಪಾದಿಗಳಿಂದಾ ಅರ್ಚಿಸಿ ಹರಿನಿವೇದಿತವಾದ ಹುಗ್ಗಿಯನ್ನು ಲಕ್ಷ್ಮೀದೇವಿಗೂ ಅರ್ಪಿಸಬೇಕು.

ದ್ವಾದಶ ನಾಮಗಳು: ಶ್ರೀದೇವೈ ನಮ:, ಅಮ್ರತೋದ್ಭವಾಯೈ ನಮ:, ಕಮಲಾಯೈ ನಮ:, ಲೋಕಸುಂದರ್ಯೈ ನಮ:,ವಿಷ್ಣುಪತ್ನೈ ನಮ:, ಶ್ರೀ ವೈಷ್ಣವೈ ನಮ:,ವರಾರೋಹಾಯೈ ನಮ:,ಹರಿವಲ್ಲಭಾಯೈ ನಮ:, ಶಾಂಗ್ರ್ರಣ್ಯೈನಮ:, ದೇವಿದೇವಿಕಾಯೈ ನಮ:, ಮಹಾಲಕ್ಷ್ಮೀನಮ:, ತ್ರಿಲೋಕಸುಂದರ್ಯೈನಮ:,

ಭದ್ರಲಕ್ಷ್ಮೀ ಸ್ತೊತ್ರ -
ಶ್ರೀ ಪದ್ಮಾ ಕಮಲಾಮುಕುಂದಮಹಿಷೀ ಲಕ್ಷ್ಮೀ ತ್ರಿಲೋಕೇಶ್ವರಿ|
 ಮಾ ಕ್ಷೀರಾಬ್ಧಿಸುತಾರವಿಂದಜನನೀ. ವಿದ್ಯಾ ಸರೋಜಾತ್ಮಿಕಾ||
ಸರ್ವಾಭೀಷ್ಠಫಲಪ್ರದೇತಿ ಸತತಂ ಸರ್ವಾನ್ ಲಭಂತೇ ಶುಭಾನ್||

ಈ ಭದ್ರಲಕ್ಷ್ಮೀಸ್ತವವನ್ನು ತುಲಾಮಾಸದಲ್ಲಿ ಕಾವೇರಿ ಸ್ನಾನವನ್ನು ಮಾಡಿಬಿಲ್ವವ್ರಕ್ಷದಕೆಳಗೆ ಕುಳಿತು ಪಠಿಸಿದರೆಶುಭವಾಗುವದು. ಫಲಶ್ರುತಿ-ಧನುರ್ಮಾಸದಲ್ಲಿಮುದ್ಗಾನ್ನ ನಿವೇದನೆಯು ಭಗವಂತನಿಗೆ ಅತ್ಯಂತ ಪ್ರೀತಿಯುಂಟುಮಾಡುವುದು,ಶತ್ರುಗಳು ನಶಿಸುವರು, ದೀರ್ಘವಾದ ಆಯುಷ್ಯವನ್ನುಪಡೆಯಬಹುದು, ಧನಧಾನ್ಯ ಸಂಪತ್ತು, ಮುಂತಾದ ಸಕಲ ಭಾಗ್ಯವುಂಟಾಗುವದು. ಜನ್ಮಜನ್ಮಗಳಲ್ಲಿ ವಿಷ್ಣುಭಕ್ತರಾಗಿ ಜನಿಸುವರು.

 !!*****!!

 ಸಂಗ್ರಹ - ಶ್ರೀ ಗುರುರಾಜಾಚಾರ್ಯ ಕೃ. ಪುಣ್ಯವಂತ. ಹುಬ್ಬಳ್ಳಿ, 9448215151

 

1 comment:

 1. ಈ ಬ್ಲಾಗ್ ನ್ನು ಕ್ರಿಯೇಟ್ ಮಾಡಿರೋದಕ್ಕೆ ತಮಗೆ(ತಾವು ಯಾರೋ ನನಗೆ ತಿಳಿಯದು)ಧನ್ಯವಾದಗಳು.
  ನನ್ನ ಕೆಲವು ಸಂಶಯಗಳನ್ನು ಪರಿಹರಿಸಬೇಕಾಗಿ ಈ ಮೂಲಕ ಕೇಳಿಕೊಳ್ಳುತ್ತಿದ್ದೇನೆ:

  ೧) ಈ ಬ್ಲಾಗ್ ನ ನಿಜವಾದ ಧ್ಯೇಯೋದ್ದೇಶ(Objectives)ಗಳೇನು ?

  ೨) ಈ ಬ್ಲಾಗ್ ನ ಸರ್ವತ್ರ ಮಾಲೀಕತ್ವ(Proprietorship), ನಿಯಂತ್ರಣ(Controle), ಸಾಮಾಜಿಕ ಜವಾಬ್ದಾರಿ(Social responcibility)? ಅವರ ಹೆಸರು, ಸಂಪರ್ಕಿಸಬೇಕಾದ ಸಂಪೂರ್ಣ ವಿಳಾಸ ಇತ್ಯಾದಿ ವಿವರಗಳನ್ನು ತಿಳಿಸಿರಿ.

  ೩) ಈ ಬ್ಲಾಗ್ ನಲ್ಲಿ ಚರ್ಚಿಸಲ್ಪಡುವ ವಾದ-ಸಂವಾದಗಳು, ಸೂಚಿಸಲ್ಪಡುವ ಅಭಿಪ್ರಾಯಗಳು, ವಿನಿಮಯ ಮಾಡಿಕೊಳ್ಳಲ್ಪಡುವ ವಿಚಾರಗಳು, ಮತ್ತು ಅವುಗಳಿಂದುಂಟಾಗಬಹುದಾದ ಯಾವುದೇ ಫಲಿತಾಂಶಗಳಿಗೆ ಯಾರಾದರೂ ಹೊಣೆ ಹೊರುತ್ತಾರೆಯೋ ಅಥವಾ ಆಯಾ ಲೇಖಕರೇ ಅವರವರ ಅಭಿಪ್ರಾಯಗಳಿಗೆ ಜವಾಬ್ದಾರಿಯೋ ?

  ಏಕೆಂದರೆ, ಪ್ರತಿನಿತ್ಯ ಇಂತಹ ಎಷ್ಟೋ ಲಕ್ಷ ಬ್ಲಾಗ್ ಗಳು ಅಂತರ್ಜಾಲದಲ್ಲಿ ಕ್ರಿಯೇಟ್ ಅಗುತ್ತವೆ ಹಾಗೂ ಅಷ್ಟೇ ಅಸಂಖ್ಯೆಯಲ್ಲಿ ಡಿಲೀಟ್ ಆಗುತ್ತವೆ.

  ಇದೊಂದು ಸಾಮಾಜಿಕ ತಾಣದಲ್ಲಿರುವ ಬ್ಲಾಗ್ ಆಗಿದ್ದು, ಈ ಕುರಿತಂತೆ ತಾವು ಯಾರೇ ಆಗಿರಲಿ ಈ ಪ್ರಶ್ನೆಗಳಿಗೆಲ್ಲಾ ಸಮಾಧಾನಕರ ಉತ್ತರಗಳನ್ನು ನೀಡಬೇಕಾದ್ದು ತಮ್ಮ ಜವಾಬ್ದಾರಿ.

  ReplyDelete