Tuesday, August 27, 2013

ಶ್ರಾವಣ ಮಾಸ ಮಹಾತ್ಮೆ - ೨

 
೭) ದೂರ್ವಾಗಣಪತಿವೃತ - ಶ್ರಾವಣ ಮಾಸದ ಚತುರ್ಥಿಯಂದು "ದೂರ್ವಾಗಣಪತಿ" ವೃತವನ್ನು ಆಚರಿಸಬೇಕು. ಮಣ್ಣಿನ ಗಣಪತಿಯನ್ನು ಮಾಡಿ ಪೀಠದ ಮೇಲೆ ದೂರ್ವೆಗಳನ್ನು ಹರಡಿ ಅದರ ಮೇಲೆ ಗಣಪತಿಯನ್ನು ಕೂಡಿಸಬೇಕು. "ಗಣಾನಾಂತ್ವಾ ಎಂಬ ಮಂತ್ರದಿಂದಾ ಆವ್ಹಾನಿಸಿ ಷೂಡಷೂಪಚಾರದಿಂದಾ ಪೂಜಿಸಬೇಕು. ಕೆಂಪು ಬಣ್ಣದ ಹೂವು ಗಳಿಂದಾ, ದೂರ್ವಾದಿಂದಾ ನಾಮಪೂಜೆಯೂಂದಿಗೆ ಏರಿಸಬೇಕು. ಗಣೇಶಾಥರ್ವ ಪಾರಾಯಣವನ್ನು ಮಾಡಿ, ಸಾಧ್ಯವಾದಲ್ಲಿ ದೂರ್ವೆ, ಕಡಬುಗಳಿಂದಾ ಹೋಮಿಸಬೇಕು. ಈ ವೃತವು ಸರ್ವವಿಘ್ನಗಳನ್ನು ಪರಿಹರಿಸುತ್ತದೆ.

೮) ಅನಂತ ವೃತ - ಶ್ರಾವಣ ಚತುರ್ಥಿಯಂದು ಅನಂತನ ಪೂಜೆಯನ್ನು ಮಾಡಬೇಕು. ಹದಿಮೂರು ಗ್ರಂಥಿಗಳುಳ್ಳ ಅನಂತನ ದಾರವನ್ನು ಮಾಡಿ ಪೂಜಿಸಿ ಬಲಹಸ್ತದಲ್ಲಿ ಕಟ್ಟಿಕೂಳ್ಳಬೇಕು.

ಇಂದು ವರಾಹ ಜಯಂತಿಕೂಡಾ ಆಚರಿಸಬೇಕು.

೯) ನಾಗ ಚತುರ್ಥಿ ವೃತ - ನಾಗ ಚತುರ್ಥಿಯಂದು ಹೆಣ್ಣುಮಕ್ಕಳು ಅಭ್ಯಂಜನಸ್ನಾನ ಮಾಡಬೇಕು ನಾಗದೆವತೆಯ ಅಂತರ್ಯಾಮಿಯಾದ ಸಂಕರ್ಷಣನನ್ನು ಮನೆಯ ಮುಂದೆ ಬಾಗಿಲಿಗೆ ಕೆಮ್ಮಣ್ಣಿನಿದಾಗಲಿ, ಗೋಮಯದಿಂದಾಗಲಿ ನಾಗನನ್ನು ಬರೆದು ಆವಾಹಿಸಿ ಅಭಿಷೇಕ ಮಾಡಿ ಗಂಧ,ದೂರ್ವಾ, ಹಳದಿಗೆಜ್ಜೆವಸ್ತ್ರಾದಿಗಳಿಂದಾ ಪೂಜಿಸಿ ಬೆಲ್ಲದನೀರು (ಹಾಲು)ಎರೆಯಬೇಕು, ಹಸಿಕಡಲೇಕಾಳು, ಅರಳು,ಹಸಿಚಿಗಳೆ, ತಂಬಿಟ್ಟು ಮುಂತಾದವುಗಳಿಂದಾ ನಿವೇದಿಸಬೇಕು. ನಂತರ ಫಲಹಾರ ಮಾಡಬಹುದು ಅಂದು ನಾರಿಯರು ಉಪವಾಸ ಮಾಡಬೇಕು.

೧೦) ನಾಗ ಪಂಚಮಿ - ಇಂದು ಐದು ಹೆಡೆಗಳುಳ್ಳ ನಾಗನನ್ನು ಮೃತಿಕೆಯಿಂದಾ ಮಾಡಿ ಅದರಲ್ಲಿ ಶೇಷಾಂತರ್ಯಾಮಿಯಾದ ಸಂಕರ್ಣನನ್ನು ಆವಾಹಿಸಿ ಷೂಡಷೂಪಚಾರಗಳಿಂದಾ ಪೂಜಿಸಿ (ಇಂದು ಕೆಂಪು ಗೆಜ್ಜೆವಸ್ತ್ರ) ಹಿಂದೆಹೇಳಿದ ಪೂಜಾದ್ರವ್ಯಗಳಿಂದಾ ಅಲಂಕಾರ ನಿವೆದನೆಗಳನ್ನು ಮಾಡಬೇಕು. ಇಂದು ಹಸುವಿನ ಹಾಲನ್ನು ಎರೆಯಬೇಕು. ಇಂದು ಮಾತ್ರ ಸ್ತ್ರೀಯರು ತೆಂಗಿನಕಾಯಿಗಳನ್ನು ಒಡೆಯಬಹುದು.

೧೧) ಗರುಡ ಪಂಚಮಿ - ಗರುಡನು ದೇವಲೋಕದಿಂದಾ ಅಮೃತವನ್ನು ತಂದು ನಾಗಗಳಿಗೆ ಕೊಟ್ಟು ನಾಗಗಳ ಬಾಯಿಯಿಂದಲೇ "ನೀನು,ಮತ್ತು ನಿನ್ನ ತಾಯಿ ವಿನತೆಯು ದಾಸ್ಯದಿಂದಾ ಮುಕ್ತರಾಗಿರುವಿರಿ" ಎಂದು ಹೇಳಿದ ದಿವಸವಿದು.

೧೨) ಸಿರಿಯಾಳ ಷಷ್ಟೀ - ಇದಿವಸ ಮೂಸರನ್ನಕ್ಕೆ ವಿಶೇಷ ಪ್ರಾಧಾನ್ಯ. ಮನೆಯಲ್ಲಿರುವ ಕನ್ಯರಿಂದಾ ಮೂಸರನ್ನ, ಮೂಸರ ಅವಲ್ಲಕ್ಕಿ, ಉಪ್ಪಿನಕಯಿಗಳನ್ನು ಸಂಕ್ರಾಂತಿಯಲ್ಲಿ ಯಳ್ಳು ಬೆಲ್ಲಾ ಬೀರಿದಂತೆ ಮನೆ ಮನೆಗಳಿಗೆ ಬಿರಬೇಕು. ಅಂದು ಭಗವಂತನಿಗೆ ಕೂಡಾ ಶಾವಿಗೆ ಪಾಯಸ, ಮೂಸರನ್ನ, ಮೂಸರವಲಕ್ಕಿ, ಉಪ್ಪಿನಕಾಯಿಗಳನ್ನು ನಿವೇದಿಸಬೇಕು. ಹಾಗು ಇವೆಲ್ಲವುಗಳನ್ನು ಒಂದು ಬಾಳೆಯಲಿಯಲ್ಲಿ ಹಾಕಿ ಬುತ್ತಿ ಕಟ್ಟಿದಂತೆ ಕಟ್ಟಿ ದಾನ ಕೂಡಬೇಕು. ಹಾಗು ಸಂಜೆ ಸ್ಕಂದ ಜನ್ಮ ವೃತ್ತಾಂತವನ್ನು ಕೇಳಬೇಕು. ಇದರಿಂದಾ ಅವರ ಭಾವಿ ಜೀವನ ಹಸನಾಗಿರುತ್ತದೆ.

೧೩,೧೪) ಅವ್ಯಂಗವೃತ - ಶ್ರಾವಣ ಶುಧ ಸಪ್ತಮಿಯನ್ನು ಶೀತಲಾ ಸಪ್ತಮಿಯಂದು ಕರೆಯುವರು. ಸಪ್ತಮಿ ಹಸ್ತಾ ನಕ್ಷತ್ರದಿಂದಾ ಕೂಡಿದ್ದರೆ "ಪಾಪನಾಶಿನಿ" ಯಂದು ಕರೆಯಲ್ಪಡುವದು. ಇಂದು ಗೋಡೆಯ ಮೇಲೆ ಭಾವಿಯ ಚಿತ್ರ, ಏಳು ಜಲದೇವತೆಗಳು, ಇಬ್ಬರು ಬಾಲಕರು, ಮೂವರು ಸ್ತ್ರೀಯರು, ಅಶ್ವ, ವೃಷಭ, ನರವಾಹನ, ಪಲ್ಲಕ್ಕಿ ಇವುಗಳ ಚಿತ್ರ ಬರೆಯಬೇಕು. ಅದರ ಕೆಳಗಡೆ ಕಲಶ ಸ್ತಾಪನೆಮಾಡಬೇಕು. ಅದರಲ್ಲಿ ಸೂರ್ಯಾಂತರ್ಗತ ನಾರಾಯಣನನ್ನು ಆವಾಹಿಸಿ ಪೂಜಿಸಿ ಸೌತೆಕಾಯಿ, ಮೂಸರನ್ನ ನಿವೇದನೆ ಮಾಡಬೇಕು. ಹಾಗು ಕಲಶದ ಮೇಲೆ ಹೂದೆಸಿದ ವಸ್ತ್ರವನ್ನು ವಿಪ್ರರಿಗೆ ದಕ್ಷಿಣಿ ಸಹಿತ ದಾನ ಕೂಡಬೇಕು. ಈ ರೀತಿಯಾಗಿ ೭ ವರ್ಷ ಪರ್ಯಂತ ಮಾಡಬೇಕು. ಇದರಿಂದಾ ಜೀವನದಲ್ಲಿ ಬರುವ ತಾಪತ್ರಯಗಳು ಶಾಂತವಾಗುವವು.

೧೫) ಪುತ್ರದಾ ಏಕಾದಶಿವೃತ - ಶ್ರಾವಣ ಶುಕ್ಲ ಏಕಾದಶಿಗೆ ಪುತ್ರದಾ ಏಕಾದಶಿ ಎಂದು ಹೆಸರು. ಈ ದಿನ ವಿಧಿ ಪೂರ್ವಕವಾಗಿ ಉಪವಾಸವನ್ನು ಮಾಡಿ ದ್ವಾದಸಿ ದಿನದಂದು ಯೂಗ್ಯ ಬ್ರಾಹ್ಮಣನಿಗೆ ಭೂಜನ ಮಾಡಿಸಿ ದಕ್ಷಿಣಿ ಕೂಟ್ಟು ತಾನು ಪ್ರಸಾದ ಸ್ವೀಕರಿಸಬೇಕು. ಇದರಿಂದಾ ಸತ್ಪುತ್ರರು ಜನಿಸುವರು.

೧೬) ನ ಕರೋತಿ ವಿಧಾನೇನ ಪವಿತ್ರಾರೋಪಣಂ ತು ಯ:|

ತಸ್ಯ ಸಂವತ್ಸರೀಪೂಜಾ ನಿಷ್ಪಲಾ ಮುನಿಸತ್ತಮಂ ||

ಶ್ರಾವಣ ಶುಕ್ಲ ದ್ವಾದಶೀಯಂದು ಪವಿತ್ರಾರೋಪಣವೆಂಬ ಮಾಡಬೇಕು.ಇದರಿಂದಾ ತಾನು ಪ್ರತಿ ದಿನವು ಮಾಡುತ್ತಿರುವ ದೇವರ ಪೂಜೆಯು ಫಲವನ್ನು ಕೂಡುವದು. ಇಲ್ಲದಿದ್ದರೆ ಆ ವರ್ಷ ಪರ್ಯಂತರ ಮಾಡಿದ ಪೂಜೆಯು ನಿಷ್ಫಲವಾಗುವದು.

೧೭) ದುರ್ಗಾಷ್ಟಮಿ - ಇಂದು ದುರ್ಗಾ ದೇವಿಯನ್ನು ಪೂಜಿಸಿ ಏಂಟು ಬತ್ತಿಗಳುಳ್ಳ ದೀಪವನ್ನು ಬೆಳಗಿ ೧೦೮ ಪ್ರದಕ್ಷಿಣಿ ನಮಸ್ಕಾರವನ್ನು ಹಾಕಬೇಕು. ಹಾಗು ದೀಪವನ್ನು ಬ್ರಾಹ್ಮಣನಿಗೆ ದಾನ ಕೂಡಬೇಕು. ಇದರಿಂದಾ ಕನ್ನೆಯರಿಗೆ, ವರಗಳಿಗೆ ಯೋಗ್ಯವಾದ ಜೋಡಿಯೊಂದಿಗೆ ಶೀಘ್ರವಾಗಿ ಲಗ್ನವಾಗುವದು.
೧೮) ಕೃಷ್ಣಾಷ್ಟಮಿ - ವಿಶೆಷ ಲೇಖನ ಇಷ್ಟರಲ್ಲಿ ನೀರೀಕ್ಷಿಸಿರಿ.೧೯) ವಾಮನ ಜಯಂತಿ - ವಿಶೆಷ ಲೇಖನ ಇಷ್ಟರಲ್ಲಿ ನೀರೀಕ್ಷಿಸಿರಿ.
 
 

No comments:

Post a Comment